Tuesday, January 14, 2025
HomeUncategorizedಹೆಣ್ಣೂರು ಮುಖ್ಯರಸ್ತೆಯ ಇಂಡಿಯಾ ಕ್ಯಾಂಪಸ್ ಕ್ರುಸೇಡ್ ಫಾರ್ ಕ್ರೈಸ್ಟ್ ಸಂಸ್ಥೆಯಲ್ಲಿ ವಿಕಲಚೇತನರ ಉತ್ಸವ

ಹೆಣ್ಣೂರು ಮುಖ್ಯರಸ್ತೆಯ ಇಂಡಿಯಾ ಕ್ಯಾಂಪಸ್ ಕ್ರುಸೇಡ್ ಫಾರ್ ಕ್ರೈಸ್ಟ್ ಸಂಸ್ಥೆಯಲ್ಲಿ ವಿಕಲಚೇತನರ ಉತ್ಸವ

ಬೆಂಗಳೂರು 8; ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ)ಯಿಂದ [ಡಿ.9] ಸೋಮವಾರ ನಗರದ ಹೆಣ್ಣೂರು ಮುಖ್ಯರಸ್ತೆಯ ಇಂಡಿಯಾ ಕ್ಯಾಂಪಸ್ ಕ್ರುಸೇಡ್ ಫಾರ್ ಕ್ರೈಸ್ಟ್ ಸಂಸ್ಥೆಯಲ್ಲಿ ವಿಕಲಚೇತನರ ಉತ್ಸವ ಆಯೋಜಿಸಲಾಗಿದೆ.
ಇಡೀ ದಿನ ನಡೆಯುವ ಈ ಕಾರ್ಯಕ್ರಮವನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ. ಕೃಷ್ಣಮೂರ್ತಿ ಉದ್ಘಾಟಿಸಲಿದ್ದು, “ಸುಸ್ಥಿರ ಭವಿಷ್ಯಕ್ಕಾಗಿ ಅಂಗವೈಕಲ್ಯ ವಲಯದ ನಾಯಕತ್ವವನ್ನು ಮುಂಚೂಣಿಗೆ ತರುವ” ವಿಷಯದ ಮೇಲೆ ಚರ್ಚೆ, ವಿಕಲಚೇತನ ವ್ಯಕ್ತಿಗಳ ಪ್ರಮುಖ ಕೊಡುಗೆಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ.
“ಯೆಸ್ ಟು ಆಕ್ಸೆಸ್” ಸ್ಮಾರ್ಟ್ಫೋನ್ ಆಪ್ ಮೂಲಕ ವಿಕಲಚೇತರನ ಸಮಸ್ಯೆಗಳು, ಪರಿಹಾರ ಕಲ್ಪಿಸುವ ಮತ್ತು ಸಮಸ್ಯೆ ಹೊಂದಿರುವ ವಿಶೇಷ ಚೇತರನ್ನು ತಲುಪುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆನ್ನುಹುರಿಯ ಗಾಯ ನಿವಾರಣೆ ಮತ್ತು ಪುನರ್ವಸತಿ ಕ್ರಮಗಳನ್ನು ಇದು ಒಳಗೊಂಡಿದೆ. ಕೌಶಲ್ಯ ತರಬೇತಿ, ವಿಶೇಷ ಚೇತನ ಸಮುದಾಯದ ಮರುಸಂಘಟನೆ, ಆಘಾತಕ್ಕೆ ಒಳಗಾದವರಿಗೆ ಪುನರ್ ವಸತಿ ಮತ್ತಿತರೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದೆ.
ಎಪಿಡಿ ಸಿಇಒ ಡಾ.ಸೆಂಥಿಲ್ ಎನ್.ಎಸ್. ಕುಮಾರ್ ಮಾತನಾಡಿ, “ಐಡಿಪಿಡಿ ದಿನಾಚರಣೆಯ ಅಂಗವಿಕಲರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರನ್ನು ಬೆಂಬಲಿಸಲು ಒಂದು ಸದಾವಕಾಶವಾಗಿದೆ. ಅಡೆತಡೆಗಳನ್ನು ಮೀರಿ, ಯೆಸ್ ಟು ಆಕ್ಸೆಸ್ ಆ್ಯಪ್ ಮತ್ತು ವೈದ್ಯಕೀಯ ಮತ್ತು ಪುನರ್ವಸತಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ಒದಗಿಸುವ ಸರ್ಕಾರಿ ಬೆಂಬಲಿತ ಉಪಕ್ರಮವಾದ ನಿರಾಮಯ ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ಅರ್ಹರನ್ನು ಸೇರ್ಪಡೆ ಮಾಡಿಕೊಳ್ಳಲು ಬೆಂಬಲಿಸಲಾಗುತ್ತದೆ ಎಂದರು.

RELATED ARTICLES
- Advertisment -
Google search engine

Most Popular