ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.)ಮಿಜಾರ್ ವತಿಯಿಂದ ಎಡಪದವು ಪೂಪಡಿಕಲ್ಲ್ ನಿವಾಸಿಯಾಗಿರುವ ಅಕ್ಷಯ್ ಕುಮಾರ್ ಅವರ ಚಿಕಿತ್ಸೆಗೆ51ನೇ ಮಾಸಿಕ ಸೇವಾ ಯೋಜನೆಯನ್ನು ನೀಡಲಾಯಿತು.
ಮಂಗಳೂರು ತಾಲೂಕಿನ ಎಡಪದವು ಪೂಪಾಡಿಕಲ್ಲು ನಿವಾಸಿಯಾಗಿರುವ ಅಕ್ಷಯ್ ಕುಮಾರ್ ರವರು ತನ್ನ ಎರಡು ಕಿಡ್ನಿಯನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇವಾಗ ಅವರ ತಾಯಿಯ ಕಿಡ್ನಿಯನ್ನು ಟ್ರಾನ್ಸ್ ಪ್ಲಾಂಟ್ ಮಾಡಲು ನಿರ್ಧರಿಸಿ ನವೆಂಬರ್ ತಿಂಗಳಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಅದಕ್ಕಾಗಿ ಸುಮಾರು 10ರಿಂದ 12ಲಕ್ಷ ಮೊತ್ತದ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.ಆದ್ದರಿಂದ ನಮಗೆ ನಿಮ್ಮ ಸಂಸ್ಥೆಯ ಮೂಲಕ ನನಗೆ ಸಹಾಯ ಮಾಡಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ 20,000/-ಧನ ಸಹಾಯದ ಚೆಕ್ ಅವರ ಮನೆಯಲ್ಲಿ ಕುಮಾರ್ ಡೆಕೋರೇಷನ್ ನ ಮಾಲೀಕರಾದ ದಯಾನಂದ ಬಂಗೇರ ಇವರ ಮೂಲಕ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಪೋರಿಮೇಲೂ ಇರುವೈಲ್ ಇದರ ಸಂಚಾಲಕರಾದ ರಂಜಿತ್ ಹಾಗೂ ತಂಡದ ಸಂಸ್ಥಾಪಕರಾದ ನವೀನ್ ಪಿ ಮಿಜಾರ್, ಅಧ್ಯಕ್ಷರಾದ ಸಂದೀಪ್ ಮಿಜಾರ್ ಉಪಸ್ಥಿತರಿದ್ದರು.