Saturday, February 15, 2025
Homeಮೂಡುಬಿದಿರೆತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.)ಮಿಜಾರ್ ಇದರ ವತಿಯಿಂದ ಧನಸಹಾಯದ ಚೆಕ್ ಹಸ್ತಾಂತರ

ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.)ಮಿಜಾರ್ ಇದರ ವತಿಯಿಂದ ಧನಸಹಾಯದ ಚೆಕ್ ಹಸ್ತಾಂತರ

ಮೂಡಬಿದ್ರೆ ತಾಲೂಕಿನ ಕಡಂದಲೆ ನಿವಾಸಿಯಾಗಿರುವ ಬಾಲಕೃಷ್ಣ ಆಚಾರ್ ಇವರು ಮಧುಮೇಹ ಹಾಗೂ ಅನಾಮಿಯ ರೋಗದಿಂದ ಬಳಲುತ್ತಿದ್ದು ಹಾಗೂ ಅವರ ಮಗಳು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಪ್ರಸ್ತುತ ದೇರಳಕಟ್ಟೆ ಕೆ. ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮಗಳಿಗೆ ಇಲ್ಲಿವರೆಗೆ ಸುಮಾರು ಹಣ ಖರ್ಚಾಗಿದ್ದು ಮುಂದಿನ ಚಿಕಿತ್ಸೆಗೆ ಸುಮಾರು ಹಣದ ಅವಶ್ಯಕತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.ನಮ್ಮದು ತುಂಬಾ ಬಡಕುಟುಂಬವಾಗಿರುವುದರಿಂದ ಅಷ್ಟೋಂದು ಹಣವನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.)ಮಿಜಾರು ಮೂಲಕ ಸಹಾಯ ಮಾಡಿ ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್(ರಿ.)ಮಿಜಾರ್ 53ನೇ ಮಾಸಿಕ ಸೇವಾ ಯೋಜನೆ ಹಸ್ತಾಂತರದ ಧನಸಹಾಯದ ಚೆಕ್ ನ್ನು ಜನವರಿ 26ರಂದು ಪುರಾತನ ಆದಿಶಕ್ತಿ ದೇವಸ್ಥಾನ ಸ್ವರಾಜ್ ಮೈದಾನ ಮೂಡಬಿದಿರೆಯಲ್ಲಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular