Saturday, February 15, 2025
Homeಉಜಿರೆಧರ್ಮಸ್ಥಳ ಪೊಲೀಸ್ ಠಾಣೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಧರ್ಮಸ್ಥಳ ಪೊಲೀಸ್ ಠಾಣೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಉಜಿರೆ: ಉಡುಪಿಯ ಭಾರತೀಯ ಜೀವವಿಮಾ ನಿಗಮದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ “ವಿಮಾಗ್ರಾಮ” ಕಾರ್ಯಕ್ರಮದಡಿಯಲ್ಲಿ ಮಂಗಳವಾರ ಧರ್ಮಸ್ಥಳ ಪೊಲೀಸ್ ಠಾಣೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು.
ಉಡುಪಿ ಜೀವವಿಮಾ ನಿಗಮದ ವಿಭಾಗೀಯ ಕಚೇರಿ ವಿಮಾ ಪ್ರಬಂಧಕರಾದ  ದಿನೇಶ ಪ್ರಭು ಮಾತನಾಡಿ ಜೀವವಿಮಾ ನಿಗಮದ ಸೇವಾಕಾರ್ಯಗಳ ಬಗ್ಯೆ ಮಾಹಿತಿ ನೀಡಿದರು.ಧರ್ಮಸ್ಥಳ ಕೇಂದ್ರ ಕಚೇರಿಯ ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷರಾದ ಕಿಶೋರ್ ಮಾತನಾಡಿ, ಕುಡಿಯುವ ನೀರಿನ ಮೂಲ ಸೌಕರ್ಯ ಒದಗಿಸಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಶುಭಾಶಂಸನೆ ಮಾಡಿದರು.
ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಮರ್ಥ್, ಬೆಳ್ತಂಗಡಿ ಯೋಜನಾಧಿಕಾರಿ ಸುರೇಂದ್ರ ಮತ್ತು ಸತೀಶ್ ಎಂ. ಉಪಸ್ಥಿತರಿದ್ದರು.
ವಿಮಾ ಸಮನ್ವಯಾಧಿಕಾರಿ ಹೇಮಲತಾ ಹೆಗಡೆ ಸ್ವಾಗತಿಸಿದರು. ಪೊಲೀಸ್ ಸಿಬ್ಬಂದಿ ಚೈತ್ರಾ ಧನ್ಯವಾದವಿತ್ತರು.

RELATED ARTICLES
- Advertisment -
Google search engine

Most Popular