ಮಂಗಳೂರು: ನಮ್ಮ ತುಳುನಾಡ್ ಟ್ರಸ್ಟ್ (ರಿ) ಇವರ ಕೊಪ್ಪರಿಗೆ ಯೋಜನೆಗೆ ಕರ್ಣಾಟಕ ಬ್ಯಾಂಕ್‌ನಿಂದ Eeco carಅನ್ನು ದೇಣಿಗೆಯಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಎಂಡಿ ಶ್ರೀ ಕೃಷ್ಣನ್ ಎಚ್ ತುಳುಬಾಷೆ, ತುಳುಸಂಸ್ಕ್ರತಿ ಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಸಲುವಾಗಿ ಟ್ರಸ್ಟ್ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.ಬ್ಯಾಂಕಿನ ಅಧ್ಯಕ್ಷ ರಾದ ಪ್ರದೀಪ್ ಕುಮಾರ್ ಅವರು ಕಾರನ್ನು ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ ಸುಧಾಕರ ಶೆಟ್ಟಿಯವರಿಗೆ ಹಸ್ತಾಂತರಿಸಿ ಮುಂದಿನ ಕಾರ್ಯ ಯೋಜನೆಗಳಿಗೆ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶೇಖರ್ ರಾವ್, ಡೈರೆಕ್ಟರ್ ಬಾಲಕೃಷ್ಣ ಅಲ್ಸೆ, ಪಿ ಅರ್ ಒ ಮಾಧವ ವಿ ಪಿ ,ಬ್ಯಾಂಕಿನ ಎಲ್ಲಾ ಜಿ ಎಂ ಗಳು ಹಾಗೂ ಟ್ರಸ್ಟಿನ ಅಧ್ಯಕ್ಷರು ರೋಹಿತಾಶ್ವ, ರಾಜೇಶ್ ಉಳ್ಳಾಲ್ , ದಯಾನಂದ ಶೆಟ್ಟಿ ಹಾಗೂ ಭಾರತ್ ಆಟೋ ಕಾರ್ಸ್ ಪ್ರೈ ಲಿ.ನಅಬ್ದುಲ್ ಘಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.