ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ (ರಿ.)ಮಿಜಾರ್ ದ.ಕ ಕರ್ನಾಟಕ ನಿಸ್ವಾರ್ಥ ಸೇವೇ ಒಂದೇ ನಮ್ಮ ಧೈಯ ಕಾರ್ಕಳ ತಾಲೂಕಿನ ಉಷಾ ಇವರ ಮಗುವಿನ ಚಿಕಿತ್ಸೆಗೆ ಹಾಗೂ ಅಪಘಾತದಲ್ಲಿ ಪೆಟ್ಟಾಗಿ ಚಿಕಿತ್ಸೆ ಪಡೆಯುತ್ತಿರುವ ಮೂಡಬಿದ್ರಿಯ ಅಭಿಷೇಕ್ ಸಾಲ್ಯಾನ್ ಇವರ ಚಿಕಿತ್ಸೆಗೆ 49ನೇ ಮಾಸಿಕ ಸೇವಾಯೋಜನೆ ಹಸ್ತಾಂತರ.
ಕಾರ್ಕಳ ತಾಲೂಕು ದೊಂಬರದಲ್ಲೆ ನಿವಾಸಿಯಾಗಿರುವ ಉಷಾ ಇವರ ಮಗು ಬ್ರಿನ್ ಟ್ಯೂಮರ್ ಖಾಯಿಲೆಯಿಂದ ಬಳಲುತ್ತಿದ್ದು.ಬಿಕ್ಕ ಮಗುವಿನಿಂದಲೇ ಖಾಯಿಲೆಯಿಂದ ಬಳಲುತ್ತಿದ್ದು ಇಲ್ಲಿಯವರೆಗೆ ಸುಮಾರು 6 ಬಾರಿ ಶಸ್ತ್ರ ಚಿಕಿತ್ಸೆ ನಡೆದಿದೆ.ಇಷ್ಟೇ ಅಲ್ಲದೆ ಉಷಾ ಇವರು ಸ್ತನ ಕ್ಯಾನ್ಸರ್ ಬಳಲುತ್ತಿದ್ದು ಇವರಿಗೆ ದಿಕ್ಕೆ ತೋಚದಂತಾಗಿದೆ. ಇವರ ಗಂಡನ ಆದಾಯ ಚಿಕಿತ್ಸೆಗೆ ಸಾಕಾಗುತ್ತಿಲ್ಲ. ಸುಮಾರು ಇಲ್ಲಿಯವರೆಗೆ 15 ಲಕ್ಷಕ್ಕಿಂತಲೂ ಅಧಿಕ ಹಣ ಖರ್ಚು ಆಗಿದ್ದು ಮುಂದಿನ ಚಿಕಿತ್ಸೆಗೆ ದಿಕ್ಕೆ ತೋಚುತಿಲ್ಲ ಎಂದು ನಮ್ಮ ತಂಡದ ಮೂಲಕ ಸಹಾಯ ಮಾಡಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದರು
ಆದ್ದರಿಂದ ಅವರ ಮನವಿಗೆ ಸ್ಪಂದಿಸಿ ಧನಸಹಾಯದ ಚೆಕ್ ಹಸ್ತಾಂತರ ಮಾಡಲಾಗುವುದು. 50ನೇ ಮಾಸಿಕ ಸೇವಾಯೋಜನೆ ಹಸ್ತಾಂತರ ಮೂಡಬಿದಿರೆಯ ಸಮಾಜ ಸೇವಾ ಸಂಸ್ಥೆಯ ಸಕ್ರಿಯ ಸದಸ್ಯ ಅಭಿಷೇಶ್ ಸಾಲ್ಯಾನ್ ಕಳೆದ 22/09/2024 ರಂದು ಬೈಕ್ ಅಪಘಾತದಲ್ಲಿ ಬಲಕಾಲಿಗೆ ತೀವ್ರವಾಗಿ ಪೆಟ್ಟಾಗಿ ಮೊಣಕಾಲಿ ನ ಲಿಗಮೆಂಟ್ ತುಂಡಾಗಿದ್ದು ಇದರ ಶಸ್ತ್ರ ಚಿಕಿತ್ಸೆ ನಡೆಸಲು ವೈದ್ಯರು ತಿಳಿಸಿದ್ದು ಸುಮಾರು 3 ಲಕ್ಷದ ಹಣ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.ಸಹೃದಯಿಗಳಾದ ನಿಮ್ಮ ಸಂಸ್ಥೆಯ ಮೂಲಕ ನನಗೆ ಸಹಾಯ ಮಾಡಿ ಎಂದು ನಮ್ಮ ಬಳಿ ಮನವಿ ಮಾಡಿಕೊಂಡಿದ್ದಾರೆ.ಸಹೃದಯಿ ನಾವೆಲ್ಲರೂ ಸಹಾಯ ಮಾಡಬೇಕಾಗಿದೆ. ಆದ್ದರಿಂದ ದಯಮಾಡಿ ತಂಡದ ಮೂಲಕ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಅವರ ಮನವಿಗೆ ಸ್ಪಂದಿಸಿ ಧನಸಹಾಯದ ಚೆಕ್ ಹಸ್ತಾಂತರ ಮಾಡಿದ್ದಾರೆ.