Saturday, December 14, 2024
Homeಬಂಟ್ವಾಳಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜುರಾದ ಅನಾರೋಗ್ಯ ಸಹಾಯಧನದ ಮಂಜೂರಾತಿ ಪತ್ರ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಜುರಾದ ಅನಾರೋಗ್ಯ ಸಹಾಯಧನದ ಮಂಜೂರಾತಿ ಪತ್ರ ಹಸ್ತಾಂತರ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ತುಂಬೆ ವಲಯದ ಸುಜೀರ್ ಮಂಗಳ ದೇವಿ ಸ್ವಸಹಾಯ ಸಂಘದ ಸದಸ್ಯರಾದ ಚಿತ್ರಾಕ್ಷಿ ಅವರ ಮಗಳಾದ ಕುಮಾರಿ ನಿಕಿತಾ ಇವಳ ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ 30,000 ಸಹಾಯಧನ ಮಂಜುರಾಗಿದ್ದು, ಇದರ ಮಂಜೂರಾತಿ ಪತ್ರವನ್ನು ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಇದರ ಟ್ರಸ್ಟಿ ಹಾಗೂ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಕೃಷ್ಣಕುಮಾರ್ ಪೂಂಜ ರವರು ಹಸ್ತಾಂತರಿಸಿದರು.

ಈ ಸಂದರ್ಭ ತರಂಗಿಪೇಟೆ ಸಿಟಿ ಮೆಡಿಕಲ್ ಮಾಲಕರಾದ ಸುಕುಮಾರ್, ಒಕ್ಕೂಟದ ಅಧ್ಯಕ್ಷರಾದ ಲೀಡಿಯಾ ಪಿಂಟೋ, ಉಪಾಧ್ಯಕ್ಷರಾದ ಸಂತೋಷ್, ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ತರಬೇತು ಮೇಲ್ವಿಚಾರಕಿ ಜಯ ಸುಧಾ, ಸೇವಾ ಪ್ರತಿನಿಧಿ ಮಲ್ಲಿಕಾ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular