Wednesday, January 15, 2025
Homeಮಂಗಳೂರುಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್ ನಿಂದ "ನೆರಳು" ಮನೆ ಹಸ್ತಾಂತರ ವಿವಿಧ ಸೇವಾ ಟ್ರಸ್ಟ್...

ಸಹಾಯ ಹಸ್ತ ಲೋಕ ಸೇವಾ ಟ್ರಸ್ಟ್ ನಿಂದ “ನೆರಳು” ಮನೆ ಹಸ್ತಾಂತರ ವಿವಿಧ ಸೇವಾ ಟ್ರಸ್ಟ್ ಗಳಿಗೆ ಗೌರವಾರ್ಪಣೆ ಸೇವಾ ಸಾಧಕರಿಗೆ ಸನ್ಮಾನ ಸಹಕರಿಸಿದ ದಾನಿಗಳಿಗೆ ಗೌರವಾರ್ಪಣೆ


ಪುತ್ತೂರು : ಸಹಾಯ ಹಸ್ತ ಲೋಕ ಸೇವಾ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ ಕರ್ನಾಟಕ ಇವರ ವತಿಯಿಂದ ಬಡ ರೇವತಿ ಕುಟುಂಬಕ್ಕೆ ದಾನಿಗಳ ಸಹಕಾರದಲ್ಲಿ ನೂತನವಾಗಿ ನಿರ್ಮಿಸಿ ಕೊಟ್ಟ ನೂತನ ಮನೆ ನೆರಳು ಇದರ ಅಸ್ತಾಂತರ ಸಮಾರಂಭ ಹಾಗೂ ಸೇವಾ ಸಾಧಕರಿಗೆ ಸನ್ಮಾನ ಸೇವಾ ಸಂಸ್ಥೆಗಳಿಗೆ ಗೌರಾರ್ಪಣೆ ಭಾನುವಾರ ಕಬಕ ಗ್ರಾಮದ ಕುಂದರಕೋಟೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪುತ್ತೂರು ನಗರ ಠಾಣ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಮಾತನಾಡಿ ಜೀವನದಲ್ಲಿ ಸಹಾಯ ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಪ್ರೀತಿಯಿಂದ, ಆದರೆತೆಯಿಂದ ದಾನ ಮಾಡಿದರೆ ಅದು ನಿಜವಾದ ಸಮಾಜ ಸೇವೆ. ಈ ನಿಟ್ಟಿನಲ್ಲಿ ಸಹಾಯಹಸ್ತ ಲೋಕ ಸೇವಾ ಟ್ರಸ್ಟ್ ಇತರ ಸಂಘ ಸಂಸ್ಥೆಗಳನ್ನು ದಾನಿಗಳನ್ನು ಸೇರಿಸಿಕೊಂಡು ನೂತನ ಮನೆಯನ್ನು ಹಸ್ತಾಂತರಿಸುವ ಮೂಲಕ ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಸಂತೋಷ ಕಂಡಿದೆ ಎಂದರು.ಸಂಪಿಟನಾ ಸಬ್ ಇನ್ಸ್ಪೆಕ್ಟರ್ ಸುಷ್ಮಾ ಭಂಡಾರಿ ಮಾತನಾಡಿ ಸಹಾಯಹಸ್ತ ಲೋಕ ಸೇವಾ ಟ್ರಸ್ಟ್ ಜಾತಿ ಮತ ಭೇದವನ್ನು ಮೀರಿ ಸಮಾಜದಲ್ಲಿನ ಆ ಶಕ್ತಿಗೆ ಸಹಾಯ ಮಾಡುವ ಮೂಲಕ ಎಲ್ಲರಿಗೂ ಸ್ಪೂರ್ತಿದಾಯಕವಾಗಿದ್ದಾರೆ. ಇನ್ನಷ್ಟು ಬಡವರಿಗೆ ಸಹಾಯ ಹಸ್ತ ಚಾಚುವ ಮೂಲಕ ನಿರಂತರವಾಗಿ ಸಂಸ್ಥೆಯ ಸೇವೆ ನಡೆಯಲಿ ಎಂದರು. ಡಾ. ಸುರೇಶ್ ಪುತ್ತುರಾಯ ಮಾತನಾಡಿ ಸಮಾಜದಲ್ಲಿ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಒಂದು ಮಾರ್ಗದರ್ಶಕ ಸಂಸ್ಥೆಯಾದ ಸಹಾಯಸ್ಥ ಲೋಕಸೇವಾ ಟ್ರಸ್ಟ್ ತೋರಿಸಿಕೊಟ್ಟಿದೆ ಎಂದರು. ಮಂಗಳೂರು ಸೇವಾ ಲೈಫ್ ಟ್ರಸ್ಟ್ ಸ್ಥಾಪಕ ಸಾಫ್ಟ್ವೇರ್ ಇಂಜಿನಿಯರ್ ಅರ್ಜುನ ಬಂಡಾರ್ಕರ್ ನೂತನ ಮನೆಯನ್ನು ಹಸ್ತಾಂತರಿಸಿ ಮಾತನಾಡಿ ಮನೆ ಕಟ್ಟಿಕೊಡುವ ಕೆಲಸ ಮುಖ್ಯವಲ್ಲ. ಅದರ ಹಿಂದಿನ ಶ್ರಮ ಎಷ್ಟಿದೆ ಎಂಬುದು ಇದರಲ್ಲಿ ತೊಡೆಗಿಸಿಕೊಂಡವರಿಗಷ್ಟೇ ಗೊತ್ತು. ನಾವು ಬೆಳೆಯುವ ಯುವ ಮೂಲಕ ಇನ್ನೊಂದು ಸಂಸ್ಥೆಯನ್ನು ಬೆಳೆಸುವ ಟ್ರಸ್ಟಿನ ಕಾರ್ಯವೈಖರಿ ಅಭಿನಂದನೆಯ ಎಂದರು.
ಆಪತ್ಬಾಂಧವ ಈಶ್ವರ್ ಮಲ್ಪೆ ಕಾರ್ಯಕ್ರಮಕ್ಕೆ ಆಗಮಿಸಿ ಟ್ರಸ್ಟಿನ ಸನ್ಮಾನವನ್ನು ಸ್ವೀಕರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಹಾಯಹಸ್ಥ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಉದನೇಶ್ವರ ಭಟ್ ಸಮಾರಂಭ ಉದ್ಘಾಟಿಸಿದರು. ವೇದಿಕೆಯಲ್ಲಿ ಶರಣ ಸಂಜೀವಿನಿ ಸೇವಾ ಟ್ರಸ್ಟಿನ ಸಚಿನ್,ಪುತ್ತೂರು ಕೆಇಬಿ A. E ರಾಜೇಶ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಲವಾರು ಸಂಘ ಸಂಸ್ಥೆಗಳು ಮನೆ ನಿರ್ಮಿಸಿ ಕೊಡುವಲ್ಲಿ ಸಹಾಯ ಮಾಡಿದ ಹಾಗೂ ಕೊಡುಗೆಗಳನ್ನು ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅರ್ಜುನ್ ಬಂಡಾರ್ಕರ್ ಮನೆಯ ಕಿ ಯನ್ನು ನೀಡುವ ಮೂಲಕ ಮನೆಯನ್ನು ರೇವತಿಯವರಿಗೆ ಹಸ್ತಾಂತರಿಸಿದರು.
ಸಂಜನಾ ಭಟ್ ಪ್ರಾರ್ಥಿಸಿದರು. ಟ್ರಸ್ಟಿನ ಕೌಶಾಧಿಕಾರಿ ಗಿರೀಶ್ ಎಂಎಸ್ ಸ್ವಾಗತಿಸಿದರು. ಸಿಆರ್‌ಪಿ ಗಣೇಶ್ ನಡುವಲು ಕಾರ್ಯಕ್ರಮ ನಿರೂಪಿಸಿದರು. ಅಧ್ಯಕ್ಷರಾದ ಡಿಎಸ್ ಓಡ್ಯ, ಕಾರ್ಯದರ್ಶಿ ಮನೋಹರ ಉಪಾಧ್ಯಕ್ಷರಾದ ಸತ್ಯನಾರಾಯಣ ಭಟ್ ಅತಿಥಿಗಳನ್ನು ಗೌರವಿಸಿದರು.

RELATED ARTICLES
- Advertisment -
Google search engine

Most Popular