Thursday, May 1, 2025
Homeಪುತ್ತೂರುಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯ ರಂಗ ಮಂದಿರ ನಿರ್ಮಾಣ...

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯ ರಂಗ ಮಂದಿರ ನಿರ್ಮಾಣ ಮಂಜುರಾದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ

ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ, ಇದರ ಪೆರ್ನೆ ವಲಯ ವ್ಯಾಪ್ತಿಯ ಕಡೇಶಿವಾಲಯ ಸರ್ಕಾರಿ ಪ್ರೌಢ ಶಾಲೆಯ ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಯೋಜನೆಯ ಸಮುದಾಯಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ರೂ ಒಂದು ಲಕ್ಷ ಅನುದಾನ ಮಂಜುರಾಗಿದ್ದು, ಸದರಿ ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿಗ ರಮೇಶ್ ರವರು ಶಾಲಾ ಶಿಕ್ಷಕರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್ ರಾವ್, ಸದಸ್ಯರಾದ ನಳಿನಾಕ್ಷಿ, ಪೆರ್ಲಾಪು ಎ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಆಚಾರ್ಯ, ಹಿರಿಯ ಸಹಶಿಕ್ಷಕರಾದ ಗೀತಾ, ಸತೀಶ್, ವಲಯ ಮೇಲ್ವಿಚಾರಕರಾದ ಶಾರದಾ ಎ, ಸೇವಾಪ್ರತಿನಿಧಿಗಳಾದ ಸುಚಿತ್ರಾ ಆಳ್ವ, ಜಲಜಾಕ್ಷಿ, ಭಾರತಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ತಾರನಾಥ, ಅನಂತ ಪದ್ಮನಾಭ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಶಿಕ್ಷಕ ವೃಂದ ದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular