ಅಳದಂಗಡಿ : ಎ.12 ರಂದು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಎದುರು ಮೈದಾನದಲ್ಲಿ ನಡೆಯುವ ಹನುಮೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಅಳದಂಗಡಿ ಅರಮನೆಯಲ್ಲಿ ಯುಗಾದಿ ಶುಭ ಸಂದರ್ಭದಲ್ಲಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರವರ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಬೆಳ್ತಂಗಡಿ ತಾಲೂಕು ಸಂಸ್ಕಾರ ಭಾರತೀ ಅಧ್ಯಕ್ಷರಾದ ಸಂಪತ್.ಬಿ.ಸುವರ್ಣ ಮತ್ತು ಹನುಮೋತ್ಸವ ಸಮಿತಿಯ ಪ್ರಧಾನ ಸಂಚಾಲಕರು, ಸಂಚಾಲಕರು, ಸಹ ಸಂಚಾಲಕರು, ಗೌರವ ಸಲಹೆಗಾರರು, ವಿವಿಧ ಸಮಿತಿಗಳ ಪ್ರಮಖರು, ಗ್ರಾಮ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.