ಗರ್ಡಾಡಿ: ಆ 13 ಪ್ರಧಾನಿ ನರೇಂದ್ರ ಮೋದಿಜಿಯವರ ಆಶಯದಂತೆ ಪ್ರತಿ ಮನೆ ಮನೆಯಲ್ಲೂ ಹರ್ ಘರ್ ತಿರಂಗಾ ಯಾತ್ರೆಯ ಅಭಿಯಾನದ ಪ್ರಯುಕ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮನೆಯ ಮುಂಭಾಗದಲ್ಲಿ ರಾಷ್ಟ್ರ ಧ್ವಜ ಹಾರಿಸಲಾಯಿತು.
ಈ ಸಂದರ್ಭದಲ್ಲಿ ಗರ್ಡಾಡಿ ಶಕ್ತಿ ಕೇಂದ್ರ ಪ್ರಮುಖ್ ದಿನಕರ ಕುಲಾಲ್, ಪಡoಗಡಿ ಗ್ರಾಮ ಪಂಚಾಯತ್ ಸದಸ್ಯರ ಯೋಗೀಶ್ ಭಟ್, ಬೂತ್ ಸಮಿತಿ ಅಧ್ಯಕ್ಷರಾದ ದಿನೇಶ್, ರಂಜಿತ್ ಶೆಟ್ಟಿ, ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಗಳಾದ ಯಾದವ ಕೋಟ್ಯಾನ್, ರೋಹಿತ್ ಗೌಡ, ಪ್ರವೀಣ್ ಕೊಡಿಯೇಲು, ಯುವಮೋರ್ಚಾ ಸಂಚಾಲಕ ಸಂತೋಷ್ ಕುಮಾರ್, ಕೇಶವ್ ಮಂಡಿoಜೆ ಹಾಗೂ ಇನ್ನಷ್ಟು ಪ್ರಮುಖರು ಉಪಸ್ಥಿತರಿದ್ದರು.