Sunday, July 21, 2024
Homeಅಪರಾಧಬೆಂಗಳೂರು-ಮಂಗಳೂರು ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿಯ ಬಂಧನ

ಬೆಂಗಳೂರು-ಮಂಗಳೂರು ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿಯ ಬಂಧನ

ಬೆಳ್ತಂಗಡಿ: ಬೆಂಗಳೂರು-ಮಂಗಳೂರು ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿಯ ಲಾಯಿಲ ಗ್ರಾಮದ ಮೊಹಮ್ಮದ್ ಅಝೀಮ್ ಎಂದು ಗುರುತಿಸಲಾಗಿದೆ. ಏ. 23ರಂದು ಖಾಸಗಿ ಬಸ್ಸಿನಲ್ಲಿ ಬಂಟ್ವಾಳ ಮೂಲದ ವಿದ್ಯಾರ್ಥಿನಿ ಊರಿಗೆ ಆಗಮಿಸುತ್ತಿದ್ದಳು. ಬಸ್ಸು ಸಕಲೇಶಪುರ ಕಳೆದು ಮುಂದಕ್ಕೆ ಬರುತ್ತಿದ್ದಂತೆ ಆರೋಪಿಯು ವಿದ್ಯಾರ್ಥಿನಿಯ ಮೈಮೇಲೆ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಬಸ್ ಸಿಬ್ಬಂದಿ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಬಳಿಕ ಬಸ್ಸಿನ ಸಹಪ್ರಯಾಣಿಕರು ನೆರವಿಗೆ ಧಾವಿಸಿ ಆತನನ್ನು ವಿಚಾರಿಸಿದಾಗ ಆತ ಬೆಳ್ತಂಗಡಿಯಾತ ಎಂಬುದು ತಿಳಿದುಬಂತು. ಬಳಿಕ ಆತ ಬಸ್ಸಿನಿಂದ ಹಾರಿ ಪರಾರಿಯಾಗಿದ್ದ. ಈ ಬಗ್ಗೆ ಯುವತಿಯ ದೂರು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular