Monday, July 15, 2024
Homeರಾಜಕೀಯಹರೀಶ್ ಪೂಂಜ ಕೇಸ್ ವಿಚಾರ : ಬೆಂಗಳೂರಿನತ್ತ ಹೊರಟ ಶಾಸಕ : ಹೈಕೋರ್ಟ್ ಗೆ ಅರ್ಜಿ...

ಹರೀಶ್ ಪೂಂಜ ಕೇಸ್ ವಿಚಾರ : ಬೆಂಗಳೂರಿನತ್ತ ಹೊರಟ ಶಾಸಕ : ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಸಾಧ್ಯತೆ

ಬೆಂಗಳೂರು : ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್353, 504ರಡಿ ಹರೀಶ್ ಪೂಂಜ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಮತ್ತು ಅವಾಚ್ಯ ಶಬ್ದಗಳಿಂದ ನಿಂದನೆ ಅಂತಾ ದೂರು ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಹರೀಶ್ ಪೂಂಜ ನಿವಾಸದ ಬಳಿ ಹೈಡ್ರಾಮಾಮೇ ನಡೆದಿತ್ತು. ಬಂಧಿಸಲು ಆಗಮಿಸಿದ್ದ ಪೊಲೀಸರು ಕೊನೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿ ತೆರಳಿದ್ದರು. ಇದೀಗ ಬೆಂಗಳೂರಿನತ್ತ ಹೊರಟಿರುವ ಹರೀಶ್ ಪೂಂಜಾ ಕೇಸ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ನಿನ್ನೆ ಠಾಣಾ ಜಾಮೀನಿನ ಮೇಲೆ ಪೂಂಜ ಬಿಡುಗಡೆ ಮಾಡಲಾಗಿತ್ತು. ಮತ್ತೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ಕೊಟ್ಟಿದ್ದರು. ಹೀಗಾಗಿ ನೋಟಿಸ್‌ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ.ವಿಚಾರಣೆಗೆ ಹಾಜರಾಗಿದ್ದ ಹರೀಶ್ ಪೂಂಜಗೆ ಇವತ್ತು ಮಧ್ಯಾಹ್ನ 12ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬೆಳ್ತಂಗಡಿ ಠಾಣೆ ಇನ್ಸ್‌ಪೆಕ್ಟ‌ರ್ ನೋಟಿಸ್‌ ನೀಡಿದ್ದರು. ಆದರೆ ಸಾಧ್ಯವಿಲ್ಲ ಅಂತಾ ಮೌಖಿಕವಾಗಿ ತಿಳಿಸಿದ್ದರು. ಅಷ್ಟೇ ಅಲ್ಲ ದಕ್ಷಿಣ ಕನ್ನಡ ಎಸ್‌ಪಿ ಬಗ್ಗೆ ಮಾತನಾಡಿದ್ದಕ್ಕೆ ಸಮರ್ಥಿಸಿಕೊಂಡಿದ್ದರು ಎಂದು ವರದಿಯಾಗಿದೆ.

RELATED ARTICLES
- Advertisment -
Google search engine

Most Popular