Monday, January 20, 2025
HomeUncategorizedಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಸಾಮರಸ್ಯ ಸಪ್ತಾಹ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಸಾಮರಸ್ಯ ಸಪ್ತಾಹ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಜ್ಞಾನ ಸಂತ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ವರ್ಷದ ಪುಣ್ಯ ತಿಥಿಯ ಪ್ರಯುಕ್ತ ತಾಲೂಕಿನಾದ್ಯಂತ “ಸಾಮರಸ್ಯ ಸಪ್ತಾಹ” ಎನ್ನುವ ವಿಶೇಷ ಕಾರ್ಯಕ್ರಮವನ್ನು ದಿನಾಂಕ 2-12-2024 ರಿಂದ 8-12-2024ರ ವರೆಗೆ ತಾಲೂಕಿನ ವಿವಿಧ ಹಾಸ್ಟೆಲ್ ಹಾಗೂ ಕಾಲೇಜು ಕ್ಯಾಂಪಸ್ಗಳಲ್ಲಿ ನಡೆಸಲಾಯಿತು.

ಒಂದು ವಾರಗಳ ಕಾಲ ನಡೆದ ಸಪ್ತಾಹದಲ್ಲಿ ಸೇವೆ, ಸ್ವಚ್ಚತೆ, ವಿಶೇಷ ಉಪನ್ಯಾಸಗಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು. ರಾಷ್ಟ್ರಾದ್ಯಂತ ಅಂಬೇಡ್ಕರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸಾಮಾಜಿಕ ಸಾಮರಸ್ಯ ದಿನವನ್ನಾಗಿ ಎಬಿವಿಪಿ ಆಚರಿಸುತ್ತಾ ಬಂದಿದೆ. ಸಮಾಜದ ಸರ್ವತೋಮುಖ ಹಿತದೃಷ್ಟಿಯಲ್ಲಿ ಕಾರ್ಯನಿರ್ವಹಿಸಿದ ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ನೋಡದೇ ರಾಷ್ಟ್ರಪುತ್ರನಾಗಿ ಸ್ಮರಿಸಬೇಕು.

ಉದ್ಘಾಟನಾ ಹಾಗೂ ಸಮಾರೋಪದ ಕಾರ್ಯಕ್ರಮದಲ್ಲಿ ಎಬಿವಿಪಿ ಹಿರಿಯ ಕಾರ್ಯಕರ್ತರಾದ ಅಡ್ವೊಕೇಟ್ ಗಾನವಿ ಪೂಜಾರಿ ಅವರು ಉಪಸ್ಥಿತರಿದ್ದರು. ವಿವಿಧ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಾಮಾಜಿಕ ಜಾಲತಾಣ ಸಹ ಸಂಚಾಲಕರಾದ ಶ್ರೀವತ್ಸ, ಕಾರ್ಯಕಾರಿಣಿ ಸದಸ್ಯರಾದ ಸಂಹಿತಾ, ಮಂಗಳೂರು ವಿಭಾಗ ಸಾಮಾಜಿಕ ಜಾಲತಾಣ ಪ್ರಮುಖರಾದ ನವೀನ್, ವಿಭಾಗ ಖೇಲೋ ಭಾರತ್ ಪ್ರಮುಖ್ ಸ್ವಸ್ತಿಕ್, ಜಿಲ್ಲಾ ಸಂಚಾಲಕರಾದ ಕಾರ್ತಿಕ್, ತಾಲೂಕು ಸಂಚಾಲಕರಾದ ಶ್ರೇಯಸ್ ಅಂಚನ್, ಸಹ-ಸಂಚಾಲಕ ಅನಂತಕೃಷ್ಣ, ನಗರ ಕಾರ್ಯದರ್ಶಿ ಮಾಣಿಕ್ಯ ಭಟ್, ಸಹ ಕಾರ್ಯದರ್ಶಿ ಶಿವನ್, ನಗರ ಕಾರ್ಯಾಲಯ ಪ್ರಮುಖ್ ರಕ್ಷಿತಾ, ಹಾಸ್ಟೆಲ್ ಸಹ-ಪ್ರಮುಖ್ ಅಭಿಲಾಷಿನಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular