ರಾಂಚಿ: ಜಾರ್ಖಂಡ್‌ನ ಗಡ್ವಾದಲ್ಲಿ ಪಾನಿಪೂರಿ ವ್ಯಾಪಾರಸ್ಥರು ರುಚಿ ಹೆಚ್ಚಿಸಲು ಯೂರಿಯಾ ಹಾಗೂ ಟಾಯ್ಲೆಟ್ ಕ್ಲೀನ್ ಮಾಡುವ ಹಾರ್ಪಿಕ್ ಬಳಸುತ್ತಿದ್ದ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಕೊಳಕು ಆಹಾರ ನೀಡಿದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಕಾಲಿನಲ್ಲಿ ಹಿಟ್ಟು ಕಲಸಿದ್ದನ್ನು ಒಪ್ಪಿದರಲ್ಲದೆ, ಪಾನಿಪೂರಿ ಸ್ವಾದ ಹೆಚ್ಚಿಸುವ ಸಲುವಾಗಿ ಅದಕ್ಕೆ ಯೂರಿಯಾ ಹಾಗೂ ಹಾರ್ಪಿಕ್ ಬಳಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಪಾನಿಪೂರಿ ವ್ಯಾಪಾರಸ್ಥರು ಕಲ್ಲಿನಲ್ಲಿ ಹಿಟ್ಟು ಕಲಸುತ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು.