Thursday, September 12, 2024
Homeಮಂಗಳೂರುಮಂಗಳೂರು | ಪಾಂಡೇಶ್ವರದ ಪಬ್‌ವೊಂದರಲ್ಲಿ ಮಹಿಳೆಗೆ ಕಿರುಕುಳ; ನಾಲ್ವರ ಬಂಧನ

ಮಂಗಳೂರು | ಪಾಂಡೇಶ್ವರದ ಪಬ್‌ವೊಂದರಲ್ಲಿ ಮಹಿಳೆಗೆ ಕಿರುಕುಳ; ನಾಲ್ವರ ಬಂಧನ

ಮೂಡುಬಿದಿರೆ: ನಗರದ ಪಾಂಡೇಶ್ವರದ ಪಬ್‌ವೊಂದಕ್ಕೆ ಬಂದಿದ್ದ ಮಹಿಳೆಯರೊಬ್ಬರಿಗೆ ನಾಲ್ವರು ಯುವಕರ ತಂಡ ಕಿರುಕುಳ ನೀಡಿದ್ದಲ್ಲದೆ, ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ತೂರು ನಿವಾಸಿಗಳಾದ ಮಹೇಶ್‌ (28), ವಿನಯ್‌ (30), ನಿತೇಶ್‌ (32), ಪ್ರೀತೇಶ್‌ ಬಂಧಿತರು.
ಪಾಂಡೇಶ್ವರದ ಮಾಲ್‌ವೊಂದರಲ್ಲಿರುವ ಪಬ್‌ನಲ್ಲಿ ಮಹಿಳೆಯೊಬ್ಬರು ತನ್ನ ಗೆಳತಿ ಜೊತೆ ಬಂದಿದ್ದರು. ಅಲ್ಲಿ ಪುತ್ತೂರಿನ ಯುವಕರ ತಂಡ ಪಾರ್ಟಿಯಲ್ಲಿ ತೊಡಗಿತ್ತು. ನಂತರ ಅವರು ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಆಕೆಯ ಮೇಲೆ ಬಾಟಲಿಯಲ್ಲಿ ಹಲ್ಲೆಗೆ ಯತ್ನಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ನಾಲ್ವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಒಬ್ಬನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಮೂವರಿಗೆ ಜಾಮೀನು ಮಂಜೂರು ಮಾಡಿದೆ.

RELATED ARTICLES
- Advertisment -
Google search engine

Most Popular