Monday, December 2, 2024
HomeUncategorizedಹಾಳೆಕಟ್ಟೆ-ಕಲ್ಯಾ: ಭಗತ್ ಸಿಂಗ್ ಸೇವಾ ಬಳಗದ ವತಿಯಿಂದ 35 ಅಶಕ್ತ ಬಡ ಮಕ್ಕಳ ಚಿಕಿತ್ಸೆ...

ಹಾಳೆಕಟ್ಟೆ-ಕಲ್ಯಾ: ಭಗತ್ ಸಿಂಗ್ ಸೇವಾ ಬಳಗದ ವತಿಯಿಂದ 35 ಅಶಕ್ತ ಬಡ ಮಕ್ಕಳ ಚಿಕಿತ್ಸೆ ಮತ್ತು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು

ಭಗತ್ ಸಿಂಗ್ ಸೇವಾ ಬಳಗ ಹಾಳೆಕಟ್ಟೆ-ಕಲ್ಯಾ ಇದರ ವತಿಯಿಂದ 35 ಅಶಕ್ತ ಬಡ ಮಕ್ಕಳ ಚಿಕಿತ್ಸೆ ಮತ್ತು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು ಭಗತ್ ಸಿಂಗ್ ಮಹಾಯೋಜನೆಯು 23-11-2024 ಸಮಯ 3-30ರಿಂದ ಶ್ರೀ ನಾಗಬ್ರಹ್ಮ ಮಣಿಕಂಠ ಶಿಬಿರದ ಮೈದಾನದಲ್ಲಿ ನಡೆಯಲಿದೆ.

23-11-2024 ಮಧ್ಯಾಹ್ನ ಗಂಟೆ 2-00ರಿಂದ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನೆ. ಗಂಟೆ 3-30ರಿಂದ ಮಹಾಯೋಜನೆಯ ಉದ್ಘಾಟನೆ. ಸಂಜೆ ಗಂಟೆ 4-30ರಿಂದ ಅಶಕ್ತ ಬಡ ಮಕ್ಕಳ ಚಿಕಿತ್ಸೆಗೆ ಮತ್ತು ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು, ಕಾರ್ಕಳ ತಾಲೂಕಿನ ಭಜನಾ ಮಂಡಳಿಗಳಿಗೆ ಮತ್ತು ಸೇವಾ ಬಳಗದ ತಂಡದವರಿಗೆ ಗೌರವ ಅಭಿನಂದನೆ ಹಾಗೂ ಧನ್ಯವಾದ ಸಮರ್ಪಣೆ ನಡೆಯಲಿದೆ. ಸಂಜೆ 5-30ರಿಂದ ರಾತ್ರಿ 8-30ರವರೆಗೆ ಸ್ಥಳೀಯ ಯುವ ಪ್ರತಿಭೆಗಳಿಂದ ನೃತ್ಯ ಪ್ರದರ್ಶನ ಮತ್ತು ಸಂಗೀತ ರಸಮಂಜರಿ. ರಾತ್ರಿ ಗಂಟೆ 9 ರಿಂದ ಕಣ್ಣ್‌ ಕಟ್ಟ್‌ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

RELATED ARTICLES
- Advertisment -
Google search engine

Most Popular