ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಹವಾಯಿ ಚಪ್ಪಲಿ ತುಂಬಾ ಫೇಮಸ್ಸಾಗಿತ್ತು. ಬಡವರು ಸಾಮಾನ್ಯವಾಗಿ ಎಲ್ಲಾ ಕಡೆಗೂ ಅದನ್ನೇ ಬಳಸುತ್ತಿದ್ದರು. ನಂತರದ ದಿನಗಳಲ್ಲಿ ವಿವಿಧ ಮಾದರಿಯ ಚಪ್ಪಲಿಗಳು ಬಂದು ಹವಾಯಿ ಚಪ್ಪಲಿಗಳ ಬಳಕೆಯೇ ಕಡಿಮೆಯಾದಂತಿದೆ. ಬಳಸಿದರೂ ಟಾಯ್ಲೆಟ್‌ಗೆ, ಬಾತ್ ರೂಂಗಷ್ಟೇ ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಾತ್ ರೂಂ ಬಳಕೆಗೂ ಹೊಸ ಹೊಸ ಡಿಸೈನ್‌ನ ಚಪ್ಪಲಿಗಳು ಬಂದು, ಅದಕ್ಕೂ ಹವಾಯಿ ಚಪ್ಪಲಿ ಬಳಸುವುದು ಕಡಿಮೆಯಾಗಿದೆ. ಆದರೆ ಇಲ್ಲೊಂದು ಸುದ್ದಿ ಓದಿದರೆ ನಿಮಗೆ ಖಂಡಿತವಾಗಿಯೂ ಅಚ್ಚರಿಯಾಗುತ್ತದೆ. ಇಲ್ಲಿ ಒಂದು ಜೊತೆ ಹವಾಯಿ ಚಪ್ಪಲಿ ಬೆಲೆ ಬರೋಬ್ಬರಿ 1 ಲಕ್ಷ ರೂ. ದಾಟಿದೆ. ಇದನ್ನು ನೀವು ನಂಬಲಾರಿರಾದರೂ, ಇದು ನಿಜ!
ಸೌದಿ ಅರೇಬಿಯಾದಲ್ಲಿ ವ್ಯಕ್ತಿಯೊಬ್ಬರು ಚಪ್ಪಲಿ ಖರೀದಿಗೆಂದು ಚಪ್ಪಲಿ ಶೋ ರೂಂಗೆ ಹೋಗಿದ್ದಾರೆ. ಆ ಶೋ ರೂಂನಲ್ಲಿ ಭಾರತದಲ್ಲಿ ದಿನ ನಿತ್ಯ ಬಳಕೆ ಮಾಡುವ ಮಾಮೂಲಿ ಚಪ್ಪಲಿಗಳನ್ನು ಎ.ಸಿ. ರೂಂನಲ್ಲಿ ಗ್ಲಾಸ್ ಒಳಗೆ ಇಟ್ಟು ಬಂಗಾರದ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಅವರು ಗಮನಿಸಿದರು. ಚಪ್ಪಲಿಗಳನ್ನು ಸಿಬ್ಬಂದಿ ಗ್ಲಾಸ್ ಒಳಗಿಂದ ತೆಗೆದು ಮೇಲೆ ಕೆಳಗೆ ಮಾಡಿ ತೋರಿಸುತ್ತಾರೆ. ಆದರೆ ಇದರ ಬೆಲೆ ಕೇಳಿ ಅವರು ಸುಸ್ತಾಗಿ ಹೋದರು. ಹೌದು, ಇದರ ಬೆಲೆ 4,590 ಸೌದಿ ರಿಯಾಲ್. ಅಂದರೆ ಭಾರತದ ಕರೆನ್ಸಿಗೆ ಹೋಲಿಸಿದರೆ ಅದರ ಬೆಲೆ ಬರೋಬ್ಬರಿ 1,02,240 ರೂ.!
ಹಳದಿ, ಹಸಿರು, ಕೆಂಪು ಹೀಗೆ ವಿವಿಧ ಬಣ್ಣದ ಈ ಚಪ್ಪಲಿಗಳಿಗೆ ಒಂದೊಂದು ಬೆಲೆಯಿದೆ. ಆದರೆ ಒಂದು ಜೊತೆ ಚಪ್ಪಲಿ ಬೆಲೆ 1 ಲಕ್ಷ ರೂ. ದಾಟಿರುವುದು ಆಶ್ಚರ್ಯವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇದು ಈಗ ವೈರಲ್ ಆಗಿದ್ದು, ಜನರು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ʻʻಭಾರತದಲ್ಲಿ ಈ ಚಪ್ಪಲಿಗಳನ್ನು ತಂದೆ ಟಾಯ್ಲೆಟ್‌ಗೆ ಬಳಸಿದರೆ, ಅಮ್ಮ ಇನ್ನೊಬ್ಬರ ಮೇಲೆ ಆಯುಧವಾಗಿ ಬಳಕೆ ಮಾಡುತ್ತಾರೆʼʼ ಎಂದು ಒಬ್ಬರು ಕಾಮೆಂಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ವಿಡಿಯೊ ನೋಡಲು ಲಿಂಕ್ ಕ್ಲಿಕ್ ಮಾಡಿ…