ಮಂಗಳೂರು: ಮಂಗಳೂರಿನ ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯ ಮ್ಯಾನೇಜರ್ ಅವರ ಸಕಾಲಿಕ ಎಚ್ಚರಿಕೆಯಿಂದ ಹಿರಿಯ ವೃದ್ಧೆಯೊಬ್ಬರು `ಡಿಜಿಟಲ್ ಅರೆಸ್ಟ್’ ವಂಚನೆಯಿಂದ ಕಳೆದುಕೊಳ್ಳುತ್ತಿದ್ದ ₹ 1.35 ಕೋಟಿ ರೂ. ರಕ್ಷಣೆಯಾಗಿದೆ.
ಬ್ಯಾಂಕಿನ ಹಿರಿಯ ಗ್ರಾಹಕಿಯೊಬ್ಬರು ಎಚ್.ಡಿ.ಎಫ್.ಸಿ. ಬ್ಯಾಂಕ್ ಕಂಕನಾಡಿ ಶಾಖೆಯಲ್ಲಿ ₹ 1.35 ಕೋಟಿ ರೂ. ಫಿಕ್ಸೆಡ್ ಡಿಪಾಸಿಟ್ ಇರಿಸಿದ್ದರು ಮತ್ತು ಬ್ರಾಂಚ್ ಮ್ಯಾನೇಜರ್ ಅವರಲ್ಲಿ ಬಂದು ತಕ್ಷಣವೇ ಹಣವನ್ನು ನೀಡುವಂತೆ ಕೋರಿದರು. ಗ್ರಾಹಕರು ಬಹಳ ಆತಂಕದಿಂದ ಇರುವುದನ್ನು ಕಂಡ ಶಾಖೆಯ ಮ್ಯಾನೇಜರ್ ಏನೋ ತಪ್ಪಾಗಿದೆ ಎಂದು ಗ್ರಹಿಸಿದರು. ಮತ್ತೊಬ್ಬರೊಂದಿಗೆ ಗ್ರಾಹಕರು ಕರೆಯಲ್ಲಿ ನಿರತರಾಗಿದ್ದನ್ನು ಗಮನಿಸಿದ್ದು ಹಾಗೂ ಆಗಾಗ್ಗೆ ಪಾವತಿಯ ಪ್ರಗತಿಯ ಬಗ್ಗೆ ಅಪ್ಡೇಟ್ ಮಾಡುತ್ತಿದ್ದುದನ್ನು ಗಮನಿಸಿದ ಮ್ಯಾನೇಜರ್ ಅವರಿಗೆ ಅದು ಸೈಬರ್ ವಂಚನೆ (ಡಿಜಿಟಲ್ ಅರೆಸ್ಟ್) ಎಂಬ ಅನುಮಾನ ಬಂದಿತು. ಬ್ರಾಂಚ್ ಮ್ಯಾನೇಜರ್ ಗ್ರಾಹಕಿಯೊಂದಿಗೆ ಮಾತನಾಡಿದಾಗ ಸೈಬರ್ ವಂಚಕರು ಕಾರ್ಯಾಚರಣೆ ನಡೆಸುತ್ತಿದ್ದ ಅನುಮಾನ ಬಂದಿತು, ತಕ್ಷಣವೇ ಅವರು ಮಂಗಳೂರಿನ ನಗರ ಕ್ರೈಮ್ ಬ್ರಾಂಚ್ ಸಂಪರ್ಕಿಸಿದರು. ಪೊಲೀಸರು ನಂಬರ್ ಬ್ಲಾಕ್ ಮಾಡಲು ಮತ್ತು ಪ್ರಕರಣ ವರದಿ ಮಾಡಲು ಗ್ರಾಹಕರಿಗೆ ನೆರವಾದರು.
ವಂಚಕರು ವೃದ್ಧೆ ಗ್ರಾಹಕಿಯನ್ನು ಪೊಲೀಸ್ ಅಧಿಕಾರಿಗಳು ಎಂದು ಹೇಳಿ ವಂಚಿಸಲು ಪ್ರಯತ್ನಿಸುತ್ತಿದ್ದರು. ಅವರು ಜಾರಿ ನಿರ್ದೇಶನಾಲಯ(ಇ.ಡಿ.)ದ ದಾಳಿಯಲ್ಲಿ ಅವರು ಈ ಗ್ರಾಹಕರಿಗೆ ಸೇರಿದ 300-400 ಡೆಬಿಟ್ ಕಾರ್ಡ್ ಗಳು ಸಿಕ್ಕಿದ್ದು ಅದರಲ್ಲಿ ಒಂದು ಈ ಗ್ರಾಹಕಿಗೆ ಸೇರಿದೆ ಎಂದು ಹೇಳಿದರು. ಅವರು ಗ್ರಾಹಕಿಯ ಖಾತೆಯನ್ನು ಹಣ ವರ್ಗಾವಣೆಗೆ ಬಳಲಾಗುತ್ತಿದ್ದು ಅದನ್ನು ಮತ್ತಷ್ಟು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ನಂತರ ವಂಚಕರು ಆರ್.ಬಿ.ಐ. ಖಾತೆ ಎಂದು ಹೇಳಿ ಅದಕ್ಕೆ ಹಣ ಕಳಿಸುವಂತೆ ಒತ್ತಾಯಿಸಿದರು. ಗ್ರಾಹಕಿಗೆ ಈ ವ್ಯವಹಾರದಲ್ಲಿ ಪಾಲಿಲ್ಲವಾದರೆ ಬಡ್ಡಿ ಸಮೇತ ಹಣ ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ವಂಚಕರು ವಿಡಿಯೋ ಕಾಲ್ ನಲ್ಲಿ ಪೊಲೀಸ್ ಅಧಿಕಾರಿಗಳಂತೆ ಬಟ್ಟೆ ಧರಿಸಿದ್ದರು ಮತ್ತು ಸುಳ್ಳು ಅರೆಸ್ಟ್ ವಾರೆಂಟ್ ಪ್ರದರ್ಶಿಸಿದರು.
ಡಿಜಿಟಲ್ ಅರೆಸ್ಟ್ ಎಂದರೇನು
ಡಿಜಿಟಲ್ ಅರೆಸ್ಟ್ ವಂಚನೆಯಲ್ಲಿ ವಂಚಕರು ವ್ಯಕ್ತಿಗಳು ಅಥವಾ ಉದ್ಯಮಿಗಳಿಗೆ ಕಾನೂನು ಜಾರಿ ಅಥವಾ ಸರ್ಕಾರಿ ಅಧಿಕಾರಿಗಳು ಎಂದು ತೋರಿಸಿಕೊಳ್ಳುತ್ತಾರೆ. ಬಲಿಪಶುಗಳನ್ನು ತೆರಿಗೆ ವಂಚನೆ, ನಿಯಮ ಉಲ್ಲಂಘನೆ ಅಥವಾ ಹಣಕಾಸು ದುರುಪಯೋಗ ಎಂದು ಆರೋಪಿಸಿ ಡಿಜಿಟಲ್ ಅರೆಸ್ಟ್ ವಾರೆಂಟ್ ಮೂಲಕ ಬೆದರಿಸುತ್ತಾರೆ. ವಂಚಕರು ಡಿಜಿಟಲ್ ಅರೆಸ್ಟ್ ವಾರೆಂಟ್ ಹಿಂಪಡೆಯಲು ಸೆಟ್ಲ್ ಮೆಂಟ್ ಶುಲ್ಕ’ ಅಥವಾ
ದಂಡ’ ಎಂದು ಹೇಳಿ ಹಣಕ್ಕಾಗಿ ಒತ್ತಾಯಿಸುತ್ತಾರೆ. ಒಮ್ಮೆ ಹಣ ಪಾವತಿಯಾದ ನಂತರ ವಂಚಕರು ಏನೂ ಗುರುತು ಬಿಡದೆ ಕಣ್ಮರೆಯಾಗುತ್ತಾರೆ. ಬಲಿಯಾದವರು ಹಣ ಕಳೆದುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ವಂಚಕರಿಗೆ ವೈಯಕ್ತಿಕ ವಿವರಗಳನ್ನು ನೀಡಿ ಗುರುತಿನ ಕಳ್ಳತನಕ್ಕೆ ಒಳಗಾಗುತ್ತಾರೆ.
ಡಿಜಿಟಲ್ ಅರೆಸ್ಟ್ ವಂಚನೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಸಲಹೆಗಳು
• ನಿಜವಾದ ಸರ್ಕಾರಿ ಅಧಿಕಾರಿಗಳು ಅಥವಾ ಕಾನೂನು ಜಾರಿ ಸಂಸ್ಥೆಯು ಪಾವತಿ ಅಥವಾ ಬ್ಯಾಂಕ್ ವಿವರಗಳನ್ನು ಎಂದಿಗೂ ಕೇಳುವುದಿಲ್ಲ.
• ವಂಚಕರು ಬಲಿಪಶುಗಳನ್ನು ಒಂದು ಕ್ಷಣವೂ ಆಲೋಚಿಸಲು ಬಿಡದೆ ತುರ್ತು ಸನ್ನಿವೇಶ ಸೃಷ್ಟಿಸುತ್ತಾರೆ.
• ಕೆವೈಸಿ ವಿವರಗಳು, ಬ್ಯಾಂಕ್ ವಿವರಗಳಾದ ಯೂಸರ್ ಐಡಿ, ಕಾರ್ಡ್ ವಿವರಗಳು, ಸಿವಿವಿ, ಒಟಿಪಿಗಳು ಅಥವಾ ಪಿನ್ ನಂಬರ್ ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಧಿಕಾರಿಗಳ ಗುರುತನ್ನು ಸ್ವತಂತ್ರವಾಗಿ ಸರ್ಕಾರಿ ಅಧಿಕಾರಿಗಳು ಅಥವಾ ಕಾನೂನು ಜಾರಿ ಸಂಸ್ಥೆಯನ್ನು ಸಂಪರ್ಕಿಸಿ ದೃಢಪಡಿಸಿಕೊಳ್ಳಬೇಕು.
• ದಾಖಲೆಗಳಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಗಮನಿಸಿ ಮತ್ತು ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ.
• ಅಂತಹ ವಂಚಕರ ಅನುಮಾನಾಸ್ಪಾದ ಸಂವಹನವನ್ನು ದೂರ ಸಂವಹನ ಇಲಾಖೆಯ ಚಕ್ಷು ಪೋರ್ಟಲ್ ಗೆ ತಕ್ಷಣವೇ ವರದಿ ಮಾಡಿ- www.sancharsaathi.gov.in
ಆನ್ಲೈನ್ ವಂಚನೆಗೆ ಬಲಿಯಾಗಿದ್ದರೆ ಗ್ರಾಹಕರು ತಕ್ಷಣವೇ ಅನಧಿಕೃತ ವಹಿವಾಟುಗಳನ್ನು ಬ್ಯಾಂಕ್ ಗೆ ವರದಿ ಮಾಡುವ ಮೂಲಕ ಪೇಮೆಂಟ್ ಚಾನೆಲ್ ಗಳಾದ ಕಾರ್ಡ್ ಗಳು/ಯುಪಿಐ/ನೆಟ್ ಬ್ಯಾಂಕಿಂಗ್ ಅನ್ನು ಬ್ಲಾಕ್ ಮಾಡುವ ಮೂಲಕ ಯಾವುದೇ ಭವಿಷ್ಯದ ನಷ್ಟಗಳನ್ನು ತಪ್ಪಿಸುತ್ತದೆ. ಗ್ರಾಹಕರು ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ) ಪ್ರಾರಂಭಿಸಿರುವ 1930 ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬಹುದು ಹಾಗೂ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಗೆ ದೂರು ಸಲ್ಲಿಸಬಹುದು.
https://www.cybercrime.gov.in
About HDFC Bank
Please click here: www.hdfcbank.com
For media queries, please contact:
Rushikesh Bade
Senior Manager- Corporate Communications
HDFC Bank Limited
Email: rushikesh.bade@hdfcbank.com
Madhu Chhibber
Head, Corporate Communications
HDFC Bank Limited
Email: madhu.chhibber@hdfcbank.com