ಗಡಿ ಪ್ರದೇಶಾಭಿವೃದ್ಧಿ ಕಾರ್ಯಕ್ರಮ ಮತ್ತು ಉಜ್ವಲ ಗ್ರಾಮಗಳ ಕಾರ್ಯಕ್ರಮದ ಅಡಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿದೆ
ಮುಂಬೈ: ಭಾರತದ ಅತ್ಯಂತ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್.ಡಿ.ಎಫ್.ಸಿ. ಬ್ಯಾಂಕ್ ತನ್ನ ಸಿ.ಎಸ್.ಆರ್. ಅಂಗವಾದ ಪರಿವರ್ತನ್ ಮೂಲಕ ತನ್ನ ಗ್ರಾಮೀಣಾಭಿವೃದ್ಧಿ ಉಪಕ್ರಮಗಳನ್ನು 298 ಗಡಿ ಗ್ರಾಮಗಳಿಗೆ ವಿಸ್ತರಿಸಿದೆ. ಈ ಗ್ರಾಮಗಳ ಕ್ಲಸ್ಟರ್ ಗಳನ್ನು ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ರಾಜಸ್ಥಾನ, ಸಿಕ್ಕಿಂ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳ ಗಡಿಗಳಲ್ಲಿವೆ. ಬ್ಯಾಂಕ್ ತನ್ನ ವ್ಯಾಪ್ತಿಯನ್ನು ಮುಂದಿನ ವರ್ಷಗಳಲ್ಲಿ 150 ಹೆಚ್ಚುವರಿ ಗ್ರಾಮಗಳಿಗೆ ವಿಸ್ತರಿಸುವ ಯೋಜನೆಗಳನ್ನು ಹೊಂದಿದೆ. ಈ ಉಪಕ್ರಮಗಳು ಕೇಂದ್ರದ ಗಡಿ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಉಜ್ವಲ ಗ್ರಾಮಗಳು ಕಾರ್ಯಕ್ರಮದಲ್ಲಿ ರೂಪಿಸಲಾದ ರಾಷ್ಟ್ರೀಯ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿವೆ.
ಗಡಿ ಪ್ರದೇಶದ ಗ್ರಾಮಗಳು ಉತ್ತರ ಮತ್ತು ಈಶಾನ್ಯ ಹಿಮಾಲಯದ ಪ್ರದೇಶಗಳು ಮತ್ತು ಪಶ್ಚಿಮದ ಮರುಭೂಮಿ ಪ್ರದೇಶಗಳು ಅವುಗಳು ತಲುಪುವುದು ಕಷ್ಟವಾಗುವಂತಹ ಕಠಿಣ ಪ್ರದೇಶ, ಅಗತ್ಯ ಸೇವೆಗಳ ಸೀಮಿತ ಲಭ್ಯತೆ ಮತ್ತು ಆರ್ಥಿಕ ದುರ್ಬಲತೆಯಂತಹ ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿವೆ. ಪರಿವರ್ತನ್ ಈ ಪ್ರದೇಶಗಳಲ್ಲಿ ಕೇಂದ್ರೀಕೃತ ಅಗತ್ಯ ಆಧರಿತ ಮಧ್ಯಪ್ರವೇಶಗಳ ಮೂಲಕ ಈ ಪ್ರದೇಶಗಳ ಸುಮಾರು ಐದು ಲಕ್ಷ ವ್ಯಕ್ತಿಗಳ ಜೀವನಗಳಿಗೆ ಪರಿಣಾಮ ಬೀರಿದೆ.
ಬ್ಯಾಂಕ್ ಈ ಪ್ರದೇಶಗಳಲ್ಲಿ ಎರಡು ಪ್ರಮುಖ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ:
1) ಸಮಗ್ರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ (ಎಚ್.ಆರ್.ಡಿ.ಪಿ): ಈ ವಿಧಾನವು 36-48 ತಿಂಗಳಲ್ಲಿ 15-20 ಹೊಂದಿಕೊಂಡ ಗ್ರಾಮಗಳ ಕ್ಲಸ್ಟರ್ ಗಳಿಗೆ ಆದ್ಯತೆ ನೀಡುತ್ತದೆ. ಇದು ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಹಣಕಾಸು ಒಳಗೊಳ್ಳುವಿಕೆ, ಆರೋಗ್ಯ ಮತ್ತು ನೈರ್ಮಲ್ಯ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಹಲವು ಆಯಾಮಗಳನ್ನು ಒಗ್ಗೂಡಿಸುತ್ತದೆ.
2) ಕೇಂದ್ರೀಕತ ಅಭಿವೃದ್ಧಿ ಕಾರ್ಯಕ್ರಮ (ಪಿಡಿಪಿ): ಈ ಉಪಕ್ರಮವು ಮಧ್ಯಪ್ರವೇಶದ ನಿರ್ದಿಷ್ಟ ಕ್ಷೇತ್ರಗಳಿಗೆ ಆದ್ಯತೆ ನೀಡುವ ಮೂಲಕ ಒಂದು ವಲಯದಲ್ಲಿ ಕೇಂದ್ರೀಕೃತ ಪರಿಣಾಮ ಸಾಧಿಸುತ್ತದೆ.
ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಪರಿವರ್ತನ್ ಉಪಕ್ರಮಗಳು ಅರುಣಾಚಲ ಪ್ರದೇಶದ ಲೋಯರ್ ದಿಬಾಂಗ್ ಕಣಿವೆ ಮತ್ತು ಶಿ ಯೊಮಿ; ಅಸ್ಸಾಂನ ಬಕ್ಸಾ ಮತ್ತು ಉದಲ್ ಗುರ, ಬಿಹಾರದ ಪಶ್ಚಿಮ ಚಂಪಾರಣ್ ಮತ್ತು ಮಧುಬನಿ; ಗುಜರಾತ್ ನ ಬನಸ್ಕಾಂತ, ಕಚ್ ಮತ್ತು ಪಟನ್; ಲಡಾಖ್; ಮಣಿಪುರದ ಚಂದೇಲ್; ಮೇಘಾಲಯದ ಪೂರ್ವ ಜೈಂತಿಯಾ ಬೆಟ್ಟಗಳು; ಪಂಜಾಬ್ ನ ಫಜಿಲ್ಕಾ ಮತ್ತು ಪಠಾಣ್ ಕೋಟ್; ರಾಜಸ್ಥಾನದ ಬಾರ್ಮರ್; ಸಿಕ್ಕಿಂನ ಗೈಲ್ಶಿಂಗ್ ವೆಸ್ಟ್ ಮತ್ತು ಪಕ್ಯೊಂಗ್; ಉತ್ತರ ಪ್ರದೇಶದ ಪಿಲಿಭಿಟ್; ಮತ್ತು ಉತ್ತರಾಖಂಡದ ಚಮೋಲಿ ಒಳಗೊಂಡಿವೆ.
ಈ ಉಪಕ್ರಮದ ಕುರಿತು ಎಚ್.ಡಿ.ಎಫ್.ಸಿ. ಬ್ಯಾಂಕ್ ಡಿ.ಎಂ.ಡಿ. ಶ್ರೀ ಕೈಝದ್ ಭರೂಚಾ, “ನಾವು ಭಾರತದ ಗಡಿ ಗ್ರಾಮಗಳಲ್ಲಿ ತಂತ್ರಜ್ಞಾನ-ಪ್ರೇರಿತ ಶಿಕ್ಷಣ, ಸುಧಾರಿತ ಕೃಷಿ ಉತ್ಪಾದಕತೆ, ನವೀಕರಿಸಬಲ್ಲ ಶಕ್ತಿ ಮತ್ತು ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಮೂಲಕ ಅರ್ಥಪೂರ್ಣ ಪರಿಣಾಮ ಉಂಟು ಮಾಡಲು ಬದ್ಧರಾಗಿದ್ದೇವೆ. ರಾಷ್ಟ್ರೀಯ ಅಭಿವೃದ್ಧಿ ಗುರಿಗಳಿಗೆ ಪೂರಕವಾಗಿ ನಾವು ಸ್ಥಳೀಯ ಸಮುದಾಯಗಳು, ಎನ್.ಜಿ.ಒ.ಗಳು ಮತ್ತು ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಕೊಡುಗೆ ನೀಡುವ ಸದೃಢ, ಸ್ವಾವಲಂಬಿ ಮತ್ತು ಉಜ್ವಲ ಸಮುದಾಯಗಳನ್ನು ನಿರ್ಮಿಸಲು ಬದ್ಧವಾಗಿದ್ದೇವೆ” ಎಂದರು.
“ಗ್ರಾಮೀಣಾಭಿವೃದ್ಧಿಯ ಸಮಗ್ರ ವಿಧಾನವು ಮುಖ್ಯವಾಗಿ ಗಡಿ ಪ್ರದೇಶಗಳಲ್ಲಿ ಬರೀ ಬಯಕೆಯಲ್ಲ, ಅದು ಸಂಪೂರ್ಣ ಅಗತ್ಯವಾಗಿದೆ” ಎಂದು ಎಚ್.ಡಿ.ಎಫ್.ಸಿ. ಬ್ಯಾಂಕ್ ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮುಖ್ಯಸ್ಥೆ ನುಸ್ರತ್ ಪಠಾಣ್ ಹೇಳುತ್ತಾರೆ. “ನಾವು ಒಂದು ವಲಯದ ಪ್ರಗತಿಯು ಮತ್ತೊಂದು ವಲಯದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಮರು ದೃಢೀಕರಿಸುವ ಮತ್ತು ಹೆಚ್ಚಿಸುವ ಮೂಲಕ ನಮ್ಮ ಮಧ್ಯಪ್ರವೇಶಗಳ ಪರಿಣಾಮ ಗರಿಷ್ಠಗೊಳಿಸುತ್ತದೆ ಎಂದು ದೃಢೀಕರಿಸುತ್ತೇವೆ” ಎಂದರು.
ಎಚ್.ಡಿ.ಎಫ್.ಸಿ. ಬ್ಯಾಂಕ್ ಪರಿವರ್ತನ್ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ
298 ಗಡಿ ಗ್ರಾಮಗಳಿಗೆ ವಿಸ್ತರಣೆ
RELATED ARTICLES