ಮಂಗಳೂರು: ಭಾರತದ ಪ್ರಮುಖ ಮ್ಯೂಚುಯಲ್ ಫಂಡ್ ಹೌಸ್‍ಗಳಲ್ಲಿ ಒಂದಾದ ಎಚ್‍ಡಿಎಫ್‍ಸಿ ಮ್ಯೂಚುಯಲ್ ಫಂಡ್, ಹಾಸನ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ 25 ಹೊಸ ಶಾಖೆಗಳನ್ನು ಉದ್ಘಾಟಿಸಿದೆ.
ಈ ಉಪಕ್ರಮವು ಕಂಪನಿಯು ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ದೇಶದಲ್ಲಿ ಮ್ಯೂಚುವಲ್ ಫಂಡ್‍ಗಳಲ್ಲಿ ಹೂಡಿಕೆ ಮಾಡುವುದನ್ನು ಹೆಚ್ಚು ಸುಲಭವಾಗಿಸಲು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿದೆ ಎಂದು ಎಚ್‍ಡಿಎಫ್‍ಸಿ ಎಎಂಸಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ನವನೀತ್ ಮುನೋಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಈ ವಿಸ್ತರಣೆಯೊಂದಿಗೆ ಎಚ್‍ಡಿಎಫ್‍ಸಿ ಮ್ಯೂಚುಯಲ್ ಫಂಡ್‍ನ ಜಾಲ ರಾಷ್ಟ್ರವ್ಯಾಪಿ 250 ಕ್ಕೂ ಹೆಚ್ಚು ಶಾಖೆಗಳಿಗೆ ವಿಸ್ತರಿಸಿದ್ದು, ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಜನರಿಗೆ ಹಣಕಾಸಿನ ಪರಿಹಾರಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ನೆರವಾಗಲಿದೆ. ಈ ಉಪಕ್ರಮವು ಭಾರತದಾದ್ಯಂತ ವಿತ್ತೀಯ ಸೇರ್ಪಡೆಯನ್ನು ಉತ್ತೇಜಿಸುವ ಸೆಬಿಯ ಉಪಕ್ರಮದೊಂದಿಗೆ ಹೊಂದಿಕೆಯಾಗುತ್ತದೆ ಎಂದು ವಿವರಿಸಿದ್ದಾರೆ.
ಈ ಹೊಸ ಶಾಖೆಗಳನ್ನು ಭರತ್‍ಪುರ್, ಭೂಸಾವಲ್, ವರಚಾ, ಬೋಪಾಲ್, ವಕಾಡ್, ಚಿತ್ತೋರ್‍ಗಢ, ಜಲ್ನಾ, ಅಜಂಗಢ, ಪುರ್ನಿಯಾ, ಸೀತಾಪುರ್, ಬಸ್ತಿ, ಅರ್ರಾ, ಬದ್ಲಾಪುರ್, ಕಾಶಿಪುರ್, ಫಿರೋಜ್‍ಪುರ, ಬರಾಸತ್, ಬಹ್ರ್ರಾಂಪುರ (ಮುರ್ಷಿದಾಬಾದ್), ಬೋಲ್ಪುರ, ಕೊಲ್ಲಂ, ಖಮ್ಮಮ್, ಹೊಸೂರು, ಹಾಸನ, ನಾಗರಕೋಯಿಲ್, ವಿಜಯನಗರಂ ಮತ್ತು ತಂಜಾವೂರುಗಳಲ್ಲಿ ಸ್ಥಾಪನೆಗೊಂಡಿವೆ.