Friday, May 16, 2025
Homeಮೂಡುಬಿದಿರೆಜೈನ ಕಾಶಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

ಜೈನ ಕಾಶಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಯಲ್ಲಿ 25.06.24ರಂದು ಬೆಳಿಗ್ಗೆ ಗಂಟೆ 10ರಿಂದ ಸಂಜೆ 3.00 ಗಂಟೆ ವರೆಗೆಆರೋಗ್ಯ ಜಾಗೃತಿ ಪ್ರಯುಕ್ತ ಏಲ್ಲಿದೆ ಪ್ರಕೃತಿ ಅಲ್ಲಿದೆ ಆರೋಗ್ಯ ಎಂಬ ಧ್ಯೇಯ ವಾಕ್ಯ ದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ)ಶ್ರೀ ಜೈನ ಮಠ ಮೂಡುಬಿದಿರೆ ಇವರ ವತಿಯಿಂದ ಉಚಿತ ನೇತ್ರ, ಕಿವಿ, ಮೂಗು ಹಾಗೂ ದಂತ ತಪಾಸಣೆ ಶಿಬಿರವು ಶ್ರೀ ಜೈನ ಮಠ ಮೂಡುಬಿದಿರೆಯ ಭಟ್ಟಾರಕ ಸಭಾಭವನ ರಮಾ ರಾಣಿ ಶೋದ ಸಂಸ್ಥಾನ ಕಟ್ಟಡ ಬಳಿ ಯಶಸ್ವಿಯಾಗಿ ಜರುಗಿತು.

ಸ್ವಸ್ತಿಶ್ರೀ ಜೈನ ವಸತಿ ಪಪೂ ಕಾಲೇಜು ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೇರವೇರಿತು. ಡಾ. ಅನುಷಾ ಸ್ವಾಗತ ಮಾಡಿದರು. ಅಧ್ಯಕ್ಷತೆ ಹಾಗೂ ಆಶೀರ್ವಾದ ನೀಡಿದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಜೀವನದಲ್ಲಿ ಜನರು ಯಶಸ್ಸು ಸಾಧಿಸಲು ಅವರ ಮನಸ್ಸು ಮಾತು ಉತ್ತಮವಾಗಿದ್ದು ಶಾರೀರಿಕ ಆರೋಗ್ಯ ಇದ್ದರೆ ಮಾತ್ರ ಸಾಧ್ಯ ವೈದ್ಯ ವೃತ್ತಿಯು ಪೂಜ್ಯತೆಯನ್ನು ತಂದು ಕೊಟ್ಟಿದೆ ಉತ್ತಮ ವೈದ್ಯರನ್ನು ಸಮಾಜ ಗೌರವ ದಿಂದ ಕಾಣುತ್ತಾರೆ ಎಂದರು. ಶೈಲೇoದ್ರ ಆರೋಹ, ಉದ್ಯಮಿಗಳು, ಮೂಡುಬಿದಿರೆ ಮಾತನಾಡಿ ಜೈನ ಮಠ ಹಾಗೂ ಧವಳತ್ರಯ ಟ್ರಸ್ಟ್ ಉತ್ತಮ ಕಾರ್ಯಕ್ರಮ ರೂಪಿಸುತ್ತಿರುದು ಖುಷಿ ಕೊಟ್ಟಿದೆ ಎಂದರು. ರೊಟೇರಿಯನ್ ಬಿ. ನಾಗರಾಜ್, ಅಧ್ಯಕ್ಷರು ರೋಟರಿ ಕ್ಲಬ್, ಮೂಡುಬಿದಿರೆ ಜನರ ಸೇವೆ ದೇವರ ಸೇವೆ ಶ್ರೀ ಮಠದ ಟ್ರಸ್ಟ್ ಕಾರ್ಯಕ್ಕೆ ಬೆಂಬಲ ಸೂಚಿಸಿದರು. ಪ್ರಜ್ವಲ್ ಆಚಾರ್ ಆಡಳಿತ ನಿರ್ದೇಶಕರು ಎಲಿಕ್ಸರ್ ಇಂಡಿಯಾ, ಲಿ.ಅಲoಗಾರು, ಮೂಡುಬಿದಿರೆ ಮಾತನಾಡಿ ಆರೋಗ್ಯವಂತ ಸಮಾಜದಿಂದ ಎಲ್ಲಾ ಅಭಿವೃದ್ಧಿ ಸಾಧ್ಯ. ಸುತ್ತ ಮುತ್ತಲ ಜನ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆಯಲಿ ಎಂದು ಶುಭ ಹಾರೈಸಿದರು. ಡಾ. ಅಪೇಕ್ಷಾ ಡಿ ರಾವ್, ಶಾಲಾಕ್ಯತಂತ್ರ ಪ್ರಧಾನ ತಜ್ಞರು, ಶಾಲಾಕ್ಯತಂತ್ರ ವಿಭಾಗ, ಆಳ್ವಾಸ್ ಆಯುರ್ವೇದ ಆಸ್ಪತ್ರೆ ಮೂಡುಬಿದಿರೆ ಮಾತನಾಡಿ ಉಚಿತ ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಶ್ರೀ ಜೈನ ಮಠ ದ ಪ.ಪೂ ಸ್ವಾಮೀಜಿ ಗಳವರಿಗೆ ಕೃತಜ್ಞತೆ ವ್ಯಕ್ತ ಪಡಿಸಿದರು. ಸಂಜಯಂತ ಕುಮಾರ್ ಶೆಟ್ಟಿ ವ್ಯವಸ್ಥಾಪಕರು ಶ್ರೀ ಜೈನ ಮಠ, ಮೂಡುಬಿದಿರೆ. ಡಾ. ಸುಶಾನ್ ಶೆಟ್ಟಿ ಕಿವಿ, ಮೂಗು ಗಂಟಲು ತಜ್ಞರು, ಆಳ್ವಾಸ್ ಆರೋಗ್ಯ ಕೇಂದ್ರ ಮೂಡುಬಿದಿರೆ. ಡಾ. ಅಭಿಷೇಕ್, ಡಾ. ಅನಘ, ಸರಿತಾ, ಆಶೀರ್ವಾದ ಜೈನ್, ಇನ್ನರ್ ವೀಲ್ ಮೂಡುಬಿದಿರೆ. ಡಾ. ದೀಕ್ಷಾ, ಡಾ. ವೈಷ್ಣವಿ, ಡಾ. ಕಿರಣ್, ಡಾ. ಐಶ್ವರ್ಯ ಉಪಸ್ಥಿತರಿದ್ದರು.

ಸ್ವಾಮೀಜಿ ಅತಿಥಿಗಳನ್ನು ವೈದ್ಯರನ್ನು ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು. ಸೌಮ್ಯ ಶ್ರೀ ಪ್ರಾಂಶುಪಾಲರು ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು ಮೂಡುಬಿದಿರೆ ವಂದಿಸಿದರು.

RELATED ARTICLES
- Advertisment -
Google search engine

Most Popular