ಕಿನ್ನಿಗೋಳಿ : ಸಮಾಜದ ಎಲ್ಲಾ ವರ್ಗಕ್ಕೂ ಆರೋಗ್ಯ ಸೇವೆ ದೊರೆಯುವ ನಿಟ್ಟನಲ್ಲಿ ತಾಳಿಪಾಡಿ ಗುತ್ತುವಿನ ಟ್ರಸ್ಟ್ ನಿಜವಾದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಅರ್ಚಕ ವಿಶ್ವೇಶ ಭಟ್ ಹೇಳಿದರು. ಅವರು ತಾಳಿಪಾಡಿ ಗುತ್ತುವಿನ ಹೆಲ್ತ್ ಸೆಂಟರ್‌ನಲ್ಲಿ ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು, ತಾಳಿಪಾಡಿ ಗುತ್ತು ಜನಕಲ್ಯಾಣ ಸಮಿತಿ ಹೆಲ್ತ್ ಸೆಂಟರ್ ತಾಳಿಪಾಡಿ ಇವರ ಸಂಯುಕ್ತ ಅಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ನೀಡಿ ಮಾತನಾಡಿದರು. ಈ ಸಂಧರ್ಭ ಕಳೆದ ನಲವತ್ತು ವರ್ಷಗಳಿಂದ ಬಹುಪ್ರತಿಭಾನ್ವಿತ ಪ್ರಾಧ್ಯಾಪಕರು, ಆಡಳಿತಾಧಿಕಾರಿಗಳು ಹಾಗೂ ಪ್ರಸಿದ್ಧ ವೈದ್ಯಾಧಿಕಾರಿಗಳಾಗಿ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅತ್ಯಮೂಲ್ಯ ಸೇವೆಯನ್ನು ಸಲ್ಲಿಸಿರುವ ಹಾಗೂ ಮಂಗಳೂರು ನಿಟ್ಟೆ ಡೀಮ್ಡ್ ಯುನಿವರ್ಸಿಟಿ, ಉಪಾಧ್ಯಕ್ಷ ಗೌರವಾನ್ವಿತ ಪ್ರೊ. ಡಾ. ಬಿ. ಸತೀಶ್ ಕುಮಾರ್ ಭಂಡಾರಿ ಇವರಿಗೆ ವಿಶೇಷ ಗೌವಾರ್ಪಣೆ ನಡೆಯಿತು.
ನಂತರ ಮಾತನಾಡಿದ ಅವರು ಎಲ್ಲಾ ಜನರಿಗೆ ಆರೋಗ್ಯ ಚಿಕಿತ್ಸೆ ದೊರಕಬೇಕೆಂಬ ದಋಷ್ಟಿಯಿಂದ ಸುಮಾರು ೨೫ ವರ್ಷಗಳಿಂದ ತಾಳಿಪಾಡಿಗುತ್ತು ಜನಕಲ್ಯಾಣ ಸಮಿತಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಆ ಮೂಲಕ ಉಚಿತ ಸೇವೆ ನೀಡುತ್ತಿರುವುದು ಅಬಿನಂದನೀಯ ಎಂದರು. ತಾಳಿಪಾಡಿ ಗುತ್ತುವಿನ ದಿನೇಶ್ ಭಂಡ್ರಿಯಾಲ್ ಅಧ್ಯಕ್ಷತೆ ವಹಿಸಿದ್ದರು , ಯುಗಪುರುಷ ಭುವನಾಭಿರಾಮ ಉಡುಪ, ತಾಳಿಪಾಡಿ ಗುತ್ತು ಜನಕಲ್ಯಾಣ ಸಮಿತಿ ಗೌರವಾಧ್ಯಕ್ಷ ತಾಳಿಪಾಡಿ ಗುತ್ತು ಪಾದೆಮನೆ ರತ್ನಾಕರ ಶೆಟ್ಟಿ, ಡಾ. ಅರುಣ್ ಶೆಟ್ಟಿ, ಡಾ ವಾಗೀಶ್ ಭಟ್, ಧನಂಜಯ ಶೆಟ್ಟಿಗಾರ್, ಕ್ಯಾ ಡಾ. ರಾಘವೇಂದ್ರ ಭಟ್, ಸುಕುಮಾರ್ ಶೆಟ್ಟಿ ತಾಳಿಪಾಡಿ ಗುತ್ತು, ಟ್ರಸ್ಟಿ ಚಿತ್ರಾ ಶೆಟ್ಟಿ ತಾಳಿಪಾಡಿ ಗುತ್ತು, ವಿಜಯ ಶೆಟ್ಟಿ ತಾಳಿಪಾಡಿ ಗುತ್ತು ಉಪಸ್ಥಿತರಿದ್ದರು. ದಾಮೋದರ ಶೆಟ್ಟಿ ಮಾಡ್ರಗುತ್ತು ಪ್ರಸ್ತಾವನೆ ಮಾಡಿ ಸ್ವಾಗತಿಸಿದರು, ಉದಯ ಪೂಂಜಾ ತಾಳಿಪಾಡಿ ಗುತ್ತು ಸನ್ಮಾನ ಪತ್ರ ವಾಚಿಸಿದರು, ದಿವಾಕರ ಕರ್ಕೇರ ಧನ್ಯವಾದ ಸಮರ್ಪಿಸಿದರು, ಕುಶಲ ಪೂಜಾರಿ ತಾಳಿಪಾಡಿ ಕಾರ್ಯಕ್ರಮ ನಿರೂಪಿದರು. ನಂತರ ಕಿವಿ, ಕಣ್ಣು, ಮೂಗು ಗಂಟಲು, ಚರ್ಮರೋಗ, ಕೀಲು, ಎಲುಬು, ಮಧುಮೇಹ, ರಕ್ತದೊತ್ತಡ ಉಚಿತ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ೨೫೦ ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು.
ತಾಳಿಪಾಡಿಗುತ್ತು ಜನಕಲ್ಯಾಣ ಸಮಿತಿಯಿಂದ ಆರೋಗ್ಯ ಶಿಬಿರ
RELATED ARTICLES