ಹಳೆಯಂಗಡಿ: ಡಿ. 30ರಂದು ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ವಿಜಯ ಮಾಸ್ಟರ್ ಟ್ರಸ್ಟ್ ಹಾಗೂ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ ಇವರ ಸಹಯೋಗದಲ್ಲಿ ಗ್ರಾಮಸ್ಥರಿಗೆ ಉಚಿತ ಆರೋಗ್ಯ ಹಾಗೂ ಮಾಹಿತಿ ಶಿಬಿರ ನಡೆಯಿತು.
ಸಮಾಜ ಸೇವಕ ದೇವಪ್ಪ ಹನುಮಂತಪ್ಪ ಶಿಬಿರವನ್ನು ಉದ್ವಾಟಿಸಿ, “ಹೃದಯ ರಕ್ತನಾಳದ ಕಾಯಿಲೆ ಇಂದು ವಿಶ್ವದ ನಂಬರ್ ಒನ್ ಕೊಲೆಗಾರ, ಅದರೆ ಇದು ಈ ರೀತಿ ಇರಬೇಕಾಗಿಲ್ಲ ನಮ್ಮ ಜೀವನದಲ್ಲಿ ಕೆಲವೇ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ನಾವು ಹೃದ್ರೋಗ ಮತ್ತು ಪಾರ್ಶ್ವವಾಯು, ಮಾನಸಿಕ ಅಸ್ವಸ್ಥತೆ ಕಡಿಮೆ ಮಾಡಬಹುದು ಜೊತೆಗೆ ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು”ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರೂ ಹಾಗೂ ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟದ ಅಧ್ಕ್ಷಕ್ಷರಾದ ಡೇನಿಯಲ್ ದೇವರಾಜ್, “ಈ ವರ್ಷ ಹೃದಯ ಆರೋಗ್ಯ ಇಕ್ಟಿಟಿಯನ್ನು ಖಾತರಿಪಡಿಸುವ ನಮ್ಮಧ್ಯೇಯದ ಭಾಗವಾಗಿ ಈಗ ಬದುಕುತ್ತಿರುವ ಎಲ್ಲಾ ವರ್ಗದ ಜನರು ದ್ವೀಘಕಾಲ, ಉತ್ತಮ ಹೃದಯ ವಾಗ್ದಾನ ಮಾಡುವ ಮೂಲಕ ಆರೋಗ್ಯಕರ ಜೀವನ, ವ್ಯಾಯಾಮ ಯೋಗಾಸನ ಮೂಲಕ ಕೊಲೆಸ್ಟಾಲ್ ಕಡಿಮೆ ಮಾಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಿಥುನ್ ಮನೋವೈದ್ಯರು, ಶ್ರೀನಿವಾಸ ಆಸ್ವತ್ರೆ ಮುಕ್ಕ ಇವರು, “ ಮನೋರೋಗದ ಬಗ್ಗೆ ಮಾಹಿತಿ ನೀಡಿದರು. ಮಂಜುನಾಥ ಅವರು, “ಮಾನವ ಹೃದಯದ ವಿವಿಧ ಭಾಗಗಳು ಹಾಗೂ ಸಂರಕ್ಷಣೆ”. ಶ್ರೀನಿವಾಸ್ ಮೆಡಿಕಲ್ ಸೈನ್ಸ್ ಕಾಲೇಜು ವಿದ್ಯಾರ್ಥಿ ಸಂಘ ಅಧ್ಕ್ಷಕ್ಷರಾದ ಕಾರ್ತಿಕ್, ಇವರು “ಹೃದಯ ಸಂರಕ್ಷಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪಾತ್ರ” ಪ್ರಮೋದ್ ಹೆಗ್ಗಡೆ ಶ್ರೀನಿವಾಸ್ ಮೆಡಿಕಲ್ ಸೈನ್ಸ್ ಕಾಲೇಜು ಮುಕ್ಕ ಇವರ ತಂಡದವರು ಗ್ರಾಮಸ್ಥರು ಹೃದ್ರೋಗ, ಮಾನಸಿಕ ಕಾಯಿಲೆ ಬಗ್ಗೆ ರೋಗಿಗಳನ್ನು ಪರೀಕ್ಷಿಸಿ, ಸಮಾಲೋಚನೆ ನಡೆಸಿ ಉಚಿತವಾಗಿ ಉನ್ನತ ವೈದಕೀಯ ಸೇವೆಗಳನ್ನು ನೀಡಿರುತ್ತಾರೆ.
ಶಿಬಿರದ ಅತಿಥಿಗಳಾಗಿ ನ್ಯಾಯಾಂಗ ಇಲಾಖೆ ಮಂಗಳೂರಿನ ಮನೋಹರ, ವಕೀಲರಾದ ರಕ್ಷಿತ್, ಅಂಗನವಾಡಿ ಕಾರ್ಯಕರ್ತೆ ಸೋಫಿಯ ಶಾಂತಿ, ರೆವೆ. ವಿಲ್ಸಿನ್ ಅಮ್ಮಣ್ಣ ಕೊಣಜೆ, ಪಾಸ್ಟರ್ ರಾಜೇಶ್ ಕೋಟ್ಯಾನ್, ಸಮಾಜ ಸೇವಕಿ ಶಂಕ್ರಮ್ಮ, ಬಸವರಾಜ್ ಮತ್ತು ರಾಘವೇಂದ್ರ ಉಪಸ್ಥಿತರಿದ್ದರು.
ವಿಜಯ ಮಾಸ್ಟರ್ ಟ್ರಸ್ಟಿನ ಟ್ರಸ್ಟಿ ಮೇರಿ ಸ್ವಪ್ನಾ ನಿರೂಪಿಸಿದರು. ಸಿ.ಎಸ್.ಐ. ಶಾಲಾ ಶಿಕ್ಷಕಿ ಪ್ರಸನ್ನಿ ವಂದಿಸಿದರು.