.
ಶ್ರೀ ರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾನಗರ ಪೆರ್ನೆ.ನೂತನ ಹಿರಿಯ ವಿದ್ಯಾರ್ಥಿ ಸಂಘದ ಪದಗ್ರಹಣದ ಪ್ರಯುಕ್ತ ಯೇನಪೋಯ ವಿಶ್ವವಿದ್ಯಾಲಯ ದೇರಳಕಟ್ಟೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಇದರ ಜಂಟಿ ಆಶ್ರಯದಲ್ಲಿ “ಬೃಹತ್ ಆರೋಗ್ಯ ಮೇಳ ,ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವು 10.11.2024ನೇ ಅದಿತ್ಯವಾರ ಬೆಳಗ್ಗೆ 9-00ರಿಂದ ಶ್ರೀ ರಾಮಚಂದ್ರ ವಿದ್ಯಾಲಯದ ಸಭಾಂಗಣ ಪೆರ್ನೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ.ಎಲ್ಲ ತರಹದ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ ನಡೆಯಲಿದ್ದು ಊರಿನವರು ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಸಂಘ ಶಿಬಿರವನ್ನು ಲಯನ್ಸ್ ಕ್ಲಬ್ ಮಾಣಿ ,ಗ್ರಾಮ ಪಂಚಾಯತ್ ಪೆರ್ನೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ-ಬಿಳಿಯೂರು ಇವರ ಸಹಕಾರದಲ್ಲಿ ಆಯೋಜಿಸಲಾಗಿ ದೆ.