ಬಂಟ್ವಾಳ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗರಿಷ್ಟ ಸಂಖ್ಯೆಯಲ್ಲಿರುವ ಕಟ್ಟಡ ಮತ್ತು ನಿಮರ್ಾಣ ಕಾರ್ಮಿಕರ ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಆರೋಗ್ಯದಾಯಕ ಸಮಾಜ ನಿರ್ವಾಹಿಸಲು ಸಹಕಾರಿಯಾಗುತ್ತದೆ ಎಂದು ಬಂಟ್ವಾಳ ನೇತ್ರಾವತಿ ಕೃಷಿಕರ ಸಂಘದ ಅಧ್ಯಕ್ಷ ಹರ್ಷೇಂದ್ರ ಹೆಗ್ಡೆ ಹೇಳಿದರು.
ಇಲ್ಲಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ಕೊರಗಜ್ಜ ಕ್ಷೇತ್ರ ಬಳಿ ಬಬ್ಬರ್ಯ ಕೃಷಿಕರ ಅಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಬ್ಬರ್ಯ ಕೃಷಿಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಬುರಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಡಾ.ಶ್ವೇತಾ ಮತ್ತು ಡಾ.ಪ್ರದೀಪ್ ಆರೋಗ್ಯ ಮಾಹಿತಿ ನೀಡಿದರು. ಸಂಘದ ಕಾರ್ಯದಶರ್ಿ ವನಮಾಲ, ತಾ.ಪಂ.ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಸಂಘದ ಕಾರ್ಯದಶರ್ಿ ವನಮಾಲ ಮತ್ತಿತರರು ಇದ್ದರು.ಪ್ರಗತಿಪರ ಕೃಷಿಕ ಗಂಗಾಧರ ಪಿಲ್ಕಾಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸದಸ್ಯರಾದ ಸತ್ಯಾ ವಂದಿಸಿ, ಪ್ರಭಾ ಕಾರ್ಯಕ್ರಮ ನಿರೂಪಿಸಿದರು.