Saturday, December 14, 2024
Homeಬೆಂಗಳೂರುಆರೋಗ್ಯವೇ ಮೊದಲು, ನಂತರ ಎಲ್ಲವೂ: ಸಿ ಎ ಡಾ.ವಿಷ್ಣು ಭರತ್ ಆಲಂಪಲ್ಲಿ

ಆರೋಗ್ಯವೇ ಮೊದಲು, ನಂತರ ಎಲ್ಲವೂ: ಸಿ ಎ ಡಾ.ವಿಷ್ಣು ಭರತ್ ಆಲಂಪಲ್ಲಿ

ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆ ಮತ್ತು ಮಾತೃ ಛಾಯಾ ಜೈನ್ ಸಮಾಜದ ಸಹಭಾಗಿತ್ವದಲ್ಲಿ ಸುಮಾರು 400 ಜನರಿಗೆ ಉಚಿತ ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿದೆ.

ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಮಾತೃ ಛಾಯಾ ಜೈನ ಸಮಾಜವು ಬಸವನಗುಡಿಯ ಸಾರ್ವಜನಿಕರ ಹಿತದೃಷ್ಟಿಯಿಂದ, ವಿಶೇಷವಾಗಿ BBMP ಗುತ್ತಿಗೆ ಸ್ಕ್ಯಾವೆಂಜರ್‌ಗಳ ವಿಶೇಷ ಕಾಳಜಿಯಿಂದ APS ಶಿಕ್ಷಣ ಸಂಸ್ಥೆ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು 26 ಅಕ್ಟೋಬರ್ 24 ರಂದು ನಡೆಸಿತು. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ನೆಡೆದ ಈ ಆರೋಗ್ಯ ಶಿಬಿರವು ತುಂಬಾ ಜನರಿಗೆ ಬೆಳಕಾಯಿತು ಎಂದೇ ಹೇಳಬಹುದು.

ಬಸವನಗುಡಿ ಕ್ಷೇತ್ರದ ಶಾಸಕ ಶ್ರೀ ರವಿ ಸುಬ್ರಹ್ಮಣ್ಯ ರವರು, ಆಚಾರ್ಯ ಪಾಠ ಶಾಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಡಾ.ವಿಷ್ಣು ಭರತ್ ಆಲಂಪಲ್ಲಿರವರು, ಜೈನ ಸಮಾಜದ ಅಧ್ಯಕ್ಷೆ ಶ್ರೀಮತಿ. ಲಲಿತಾ ಜೈನ್, ಮಾಜಿ ಕಾರ್ಪೋರೇಟರ್ ಶ್ರೀಮತಿ.ಕವಿತಾ ಜೈನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಆರೋಗ್ಯ ಶಿಬಿರದ ವಿಶೇಷತೆಯು ಕ್ಯಾನ್ಸರ್ ರೋಗನಿರ್ಣಯವನ್ನು ಪರಿಶೀಲಿಸುವುದು. ಶಿಬಿರದಲ್ಲಿ ಮಕ್ಕಳೂ ಸೇರಿದಂತೆ 400 ಜನರನ್ನು ತಪಾಸಣೆಗೆ ಒಳಪಡಿಸಲಾಯಿತು ಮತ್ತು ಅವರಿಗೆ ವರದಿಗಳನ್ನು ನೀಡಲಾಯಿತು ಮತ್ತು ಚಿಕಿತ್ಸೆಗಾಗಿ ಎಲ್ಲಿ ಚಿಕಿತ್ಸೆತೆಗೆದುಕೊಳ್ಳಬೇಕು ಎಂದು ನುರಿತ ವೈದ್ಯರ ತಂಡ ತಿಳಿಸಿತು.
90 ವರ್ಷಗಳ ಸುಧೀರ್ಘ ಇತಿಹಾಸವನ್ನು ಹೊಂದಿರುವ APS ಸಂಸ್ಥೆಯು, ತನ್ನ ಸದಸ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅವರ ವಿಶಾಲ APS ಕುಟುಂಬದ ಸರ್ವತೋಮುಖ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ಮಾತೃಛಾಯಾ ಜೈನ ಸಮಾಜವು ಕಳೆದ 25 ವರ್ಷಗಳಿಂದ ಪಕ್ಷಿಗಳು, ಪ್ರಾಣಿಗಳು ಮತ್ತು ಮನುಷ್ಯರನ್ನು ಒಳಗೊಂಡಂತೆ ಪ್ರಕೃತಿಯ ಉದ್ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ. ಅವರು ಪ್ರತಿನಿತ್ಯ ಪಾರಿವಾಳಗಳಿಗೆ ಅನ್ನ ಮತ್ತು ಧಾನ್ಯಗಳನ್ನು ತಿನ್ನಿಸುತ್ತಾರೆ, ಬೀದಿ ನಾಯಿಗಳಿಗೆ ಹಾಲು, ಹಸುಗಳಿಗೆ ಚಪಾತಿ, ಆಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಾರೆ, ಜೈನ ಮಕ್ಕಳಿಗೆ ಶಾಲಾ ಶುಲ್ಕ ಮತ್ತು ಆಹಾರ, ಅಂಧ ಮಕ್ಕಳ ಕಣ್ಣಿನ ತಪಾಸಣೆ ಮತ್ತು ಬದಲಿ ಕಣ್ಣುಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ.

50 ಕ್ಕೂ ಹೆಚ್ಚು ಜೈನ ಸಮಾಜದ ಮಹಿಳಾ ಪ್ರತಿನಿಧಿಗಳು ಏಕರೂಪದ ಬಣ್ಣದ ಸೀರೆಯಲ್ಲಿ ಬಂದು ನಗುಮೊಗದೊಂದಿಗೆ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು. ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎ.ಪಿ.ಎಸ್.ಅಧ್ಯಕ್ಷರಾದ ಸಿ ಎ ಡಾ .ವಿಷ್ಣು ಭರತ್ ಆಲಂಪಳ್ಳಿ ವಿವಿಧ ವಯೋಮಾನದ 50 ಮಂದಿ ಮಹಿಳೆಯರು ಸಮವಸ್ತ್ರ ಸೀರೆಯಲ್ಲಿ ಬಂದು ನಗುಮೊಗದಿಂದ ಸೇವೆ ಸಲ್ಲಿಸುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿ ಮಾತನಾಡಿದ್ದಾರೆ, ಆರೋಗ್ಯವೇ ಮೊದಲು,ನಂತರ ಎಲ್ಲವೂ ಎಂದು ಹೇಳಿದರು. ಧ್ಯಾನ, ವ್ಯಾಯಾಮ, ಸಮಯೋಚಿತ ಆಹಾರ, ಸಕಾರಾತ್ಮಕ ವಿಧಾನ, ಸದಾ ನಗುತ್ತಿರುವುದು ಮತ್ತು ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಇರುವ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಪರಿಪೂರ್ಣವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular