ಮೈಸೂರು: ಡೆಂಗ್ಯೂ ಜ್ವರದ ಹಾವಳಿ ಈಗ ತೀವ್ರಗೊಂಡಿದೆ. ಮೈಸೂರಿನಲ್ಲಿ ಡೆಂಗ್ಯೂ ಜ್ವರಕ್ಕೆ ಆರೋಗ್ಯಾಧಿಕಾರಿಯೇ ಬಲಿಯಾಗಿದ್ದಾರೆ. ಹುಣಸೂರು ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಗ್ಯಾಧಿಕಾರಿ ಡೆಂಗ್ಯೂ ಜ್ವರದಿಂದ ಕೊನೆಯುಸಿರೆಳೆದಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 162 ಸಕ್ರಿಯ ಡೆಂಗ್ಯೂ ಜ್ವರದ ಪ್ರಕರಣಗಳು ದಾಖಲಾಗಿವೆ. ಹಾಸನದಲ್ಲೂ ಡೆಂಗ್ಯೂ ಜ್ವರ ಮಕ್ಕಳನ್ನೇ ಕಾಡುತ್ತಿದೆ. ಮೂವರು ಬಾಲಕಿಯರು ಒಂದೇ ವಾರದಲ್ಲಿ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲೂ ಮಕ್ಕಳೇ ಹೆಚ್ಚಿದ್ದಾರೆ.