Thursday, July 25, 2024
Homeಉಡುಪಿಬಸ್ಸಿನಲ್ಲೇ ಹೃದಯಾಘಾತ; ಉದ್ಯಮಿ ಪ್ರಶಾಂತ್ ಶೆಟ್ಟಿ ನಿಧನ

ಬಸ್ಸಿನಲ್ಲೇ ಹೃದಯಾಘಾತ; ಉದ್ಯಮಿ ಪ್ರಶಾಂತ್ ಶೆಟ್ಟಿ ನಿಧನ

ಸಿದ್ದಾಪುರ: ಪುಣೆಯಿಂದ ಕುಂದಾಪುರಕ್ಕೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ, ಸಮಾಜ ಸೇವಕ ಪ್ರಶಾಂತ್ ಶೆಟ್ಟಿ ನೂಜಿನಬೈಲು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉಳ್ಳೂರು-74 ಗ್ರಾಮದ ನೂಜಿನಬೈಲು ನಿವಾಸಿ 50ರ ಹರೆಯದ ಪ್ರಶಾಂತ್ ಶೆಟ್ಟಿ ಅವರು ಮಾರ್ಗಮಧ್ಯೆ ಹೊನ್ನಾವರದಲ್ಲಿ ಮೇ 1ರ ಬೆಳಗಿನ ಸಮಯ ಹೃದಯಾಘಾತಕ್ಕೊಳಗಾಗಿ ನಿಧನರಾದರು.

ಹೊನ್ನಾವರ ಹತ್ತಿರ ಬರುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡು, ಬಸ್ಸು ನಿರ್ವಾಹಕರಿಗೆ ಮಾಹಿತಿ ನೀಡಿದ್ದರು. ನಿರ್ವಾಹಕ ಕೂಡಲೇ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ  ಅವರು ಮೃತಪಟ್ಟರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular