Sunday, January 19, 2025
Homeಚಿಕ್ಕಬಳ್ಳಾಪುರಹೃದಯ ವಿದ್ರಾವಕ ಘಟನೆ: ಅಪ್ಪನ ಕಣ್ಣೆದುರೇ ಮಗಳು ಅಪಘಾತದಲ್ಲಿ ಬಲಿ

ಹೃದಯ ವಿದ್ರಾವಕ ಘಟನೆ: ಅಪ್ಪನ ಕಣ್ಣೆದುರೇ ಮಗಳು ಅಪಘಾತದಲ್ಲಿ ಬಲಿ

ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಇಂಟರ್ನ್‍ಶಿಪ್‌ಗೆ ಹೊರಟ ಮಗಳನ್ನು ಬೈಕ್‌ನಲ್ಲಿ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಬಂದ ತಂದೆ ಕಣ್ಣೆದುರೇ ಮಗಳು ಅಪಘಾತಕ್ಕೆ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯ ಅಂಭಾಭವಾನಿ ಹೊಟೇಲ್ ಬಳಿ ನಡೆದಿದೆ.
ಯೋಗಿತಾ (22) ಮೃತ ದುರ್ದೈವಿ. ಹಾಸನದ ಕಾಲೇಜಿನಲ್ಲಿ ಪಶು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಯೋಗಿತಾ, ಅಂತಿಮ ವರ್ಷ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್‍ಶಿಪ್‌ ಮಾಡುತ್ತಿದ್ದಳು.
ಪ್ರತಿ ದಿನ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಸ್ ಮೂಲಕ ಪ್ರಯಾಣ ಮಾಡುತ್ತಿದ್ದು, ಬಸ್ ನಿಲ್ದಾಣಕ್ಕೆ ತಂದೆ ಬೈಕ್ ಮೂಲಕ ಡ್ರಾಪ್ ಮಾಡುತ್ತಿದ್ದರು. ಅದರಂತೆ ತಮ್ಮ ಮಗಳನ್ನು ಡ್ರಾಪ್ ಮಾಡುವಾಗ ಅಂಭಾಭವಾನಿ ಹೊಟೇಲ್ ಮುಂಭಾಗ ಕ್ಯಾಂಟರ್‌ಗೆ ಅಡ್ಡ ಬಂದ ಪಾದಚಾರಿ ತಪ್ಪಿಸಲು ಕ್ಯಾಂಟರ್ ಚಾಲಕ ಸೈಡಿಗೆ ಎಳೆದಿದ್ದು ಈ ವೇಳೆ ಬೈಕ್‌ಗೆ ಕ್ಯಾಂಟರ್ ಟಚ್ ಆಗಿ ಬೈಕ್ ಕೆಳಗೆ ಉರುಳಿದೆ. ಈ ವೇಳೆ ಬೈಕ್‌ನ ಹಿಂಬದಿ ಕೂತಿದ್ದ ಯೋಗಿತಾ ನೆಲಕ್ಕೆ ಬಿದ್ದಿದ್ದು ತಲೆಗೆ ಗಂಭೀರವಾದ ಗಾಯವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಈ ಮಧ್ಯೆ ಮೃತಪಟ್ಟಿದ್ದಾಳೆ.
ಯೋಗಿತಾ ತಂದೆ ಅಂದಾರ್ಲಹಳ್ಳಿ ಗ್ರಾಮದವರಾಗಿದ್ದು ಚಿಕ್ಕಬಳ್ಳಾಪುರ ನಗರದಲ್ಲಿ ವಾಸವಾಗಿದ್ದರು. ತಂದೆಯೇ ಕಣ್ಣೆದುರೇ ಮಗಳು ಸಾವನ್ನಪ್ಪಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular