Saturday, January 18, 2025
HomeUncategorizedಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ(ರಿ), ವಿದ್ಯಾಗಿರಿ, ಬಂಟ್ವಾಳ ಇದರ ಮಾಜಿ ಅಧ್ಯಕ್ಷ ಕೂಡಿಗೆ ರಘುನಾಥ...

ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ(ರಿ), ವಿದ್ಯಾಗಿರಿ, ಬಂಟ್ವಾಳ ಇದರ ಮಾಜಿ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ


ಬೆಳ್ತAಗಡಿ ತಾಲೂಕಿನ ಲಾÊಲ ಗ್ರಾಮದ ಹಳೆಪೇಟೆ ಕೂಡಿಗೆ ಪಾಂಡುರAಗ ಶೆಣೈ ಮತ್ತು ಕೂಡಿಗೆ ಕಾವೇರಿ ಶೆಣೈ ದಂಪತಿಗಳಿಗೆ ೦೨ ಗಂಡು ಮಕ್ಕಳು ಮತ್ತು ಒಬ್ಬರು ಹೆಣ್ಣು ಮಗಳಿದ್ದು, ಅದರಲ್ಲಿ ಕೂಡಿಗೆ ರಘುನಾಥ ಶೆಣೈರವರು ಹಿರಿಯ ಮಗನಾಗಿ ೧೮-೦೧-೧೯೩೭ರಂದು ಜನಿಸಿರುತ್ತಾರೆ. ಬಂಟ್ವಾಳ ರಘುರಾಮ ಮುಕುಂದ ಪ್ರಭುರವರ ಮಗಳಾದ ಶ್ರೀಮತಿ ಹೇಮಲತಾ ಶೆಣೈರವರನ್ನು ವಿವಾಹವಾಗಿರುತ್ತಾರೆ.
ಶ್ರೀ ಕೂಡಿಗೆ ರಘುನಾಥ ಶೆಣೈಯವರು, ಬಿಎಸ್ಸಿ (ಇಂಜಿನಿಯರ್), ಎಂ.ಟೆಕ್, ಎಂ,ಬಿ.ಎ (ಯು.ಎಸ್.ಎ) ಪದವೀಧರರಾಗಿದ್ದು, ಇವರು ಆನಂದ ಟ್ರಾನ್ಸ್ ಪೋರ್ಟ್ ಮತ್ತು ಪ್ರಿಂರ‍್ಸöನ ಪಾಲುಧಾರಾಗಿದ್ದು, ಕಾತ್ಯಾಯಿನಿ ಇನ್ವೆಸ್ಟ್ಮೆಂಟ್ ಹಾಗೂ ಮೈಸೂರಿನ ಪ್ಲಾನಿಟೆಕ್ಸ್ ರೆಸಾರ್ಟ್ ಮತ್ತು ಎಮ್ಯೂಸ್ಮೆಂಟ್ ಪಾರ್ಕ್ನ ಮಾಲೀಕರಾಗಿದ್ದರು.
ಶ್ರೀ ಕೂಡಿಗೆ ರಘುನಾಥ ಶೆಣೈಯವರು ೧೯೮೫ ರಿಂದ ೨೦೨೨ರ ವರೆಗೆ ಸತತ ೩೭ ವರ್ಷಗಳ ಕಾಲ ಸುಧೀರ್ಘವಾಗಿ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ(ರಿ), ವಿದ್ಯಾಗಿರಿ, ಬಂಟ್ವಾಳ ಇದರ ಆಧ್ಯಕ್ಷರಾಗಿದ್ದರು. ಇವರ ಅಧ್ಯಕ್ಷತೆಯ ಅವಧಿಯಲ್ಲಿ ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳಾದ ಶ್ರೀ ವೆಂಕಟರಮಣ ಸ್ವಾಮೀ ಪದವಿ ಕಾಲೇಜು ವಿದ್ಯಾಗಿರಿ ಬಂಟ್ವಾಳ, ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು ವಿದ್ಯಾಗಿರಿ ಬಂಟ್ವಾಳ, ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆ, ವಿದ್ಯಾಗಿರಿ ಬಂಟ್ವಾಳ ಇಲ್ಲಿನ ಮೂಲಭೂತ ಸೌರ‍್ಯಗಳ ಅಭಿವೃಧ್ಧಿಗಾಗಿ ತಾವೇ ಸ್ವತಃ ಮುತುವರ್ಜಿವಹಿಸಿ ಪ್ರಗತಿಪಥದಲ್ಲಿ ಮುಂದುವರಿಸಿದ ಮಹನೀಯರು. ಬಂಟ್ವಾಳದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಬಂಟ್ವಾಳ ತಾಲೂಕಿನಲ್ಲಿಯೇ ಮೊಟ್ಟಮೊದಲು ಬಂಟ್ವಾಳ ರಘುರಾಮ ಮುಕುಂದ ಪ್ರಭುರವರ ಜನ್ಮ ಶತಮಾನೋತ್ಸವದ ಸವಿನೆನಪಿಗಾಗಿ ೨೦೦೭ರಲ್ಲಿ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ವಿದ್ಯಾಗಿರಿ ಬಂಟ್ವಾಳ ಎಂಬ ಹೆಸರಿನಲ್ಲಿ ೦೧ ರಿಂದ ೧೦ನೇ ತರಗತಿಯವರೆಗಿನ ಸಿ.ಬಿ.ಎಸ್. ಸಿ. ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ ಸಂಸ್ಥಾಪಕರು ಆಗಿದ್ದರು.
ಸರಳ ಸಜ್ಜನಿಕೆಯ ಶೈಕ್ಷಣಿಕ ದೂರದೃಷ್ಟಿಯುಳ್ಳ ಮೃದುಸ್ವಭಾವದ ಮನೋಭಾವರಾದ ಕೂಡಿಗೆ ರಘುನಾಥ ಶೆಣೈರವರು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಕಂಡುAಡ ಪರಿಸ್ಥಿತಿಗಳನ್ನು ಅರಿತು ನಿಸ್ಪಕ್ಷಪಾತವಾಗಿ ಜಾತಿ ಧರ್ಮದ ಬೇಧ-ಭಾವ ಇಲ್ಲದೇ ಯಾವುದೇ ಪ್ರಚಾರವಿಲ್ಲದೇ ಗೌಪ್ಯವಾಗಿ ತಾವೇ ವೈಯಕ್ತಿಕವಾಗಿ ಪ್ರತಿ ವರ್ಷ ಸರಿ ಸುಮಾರು ೪೦ ಲಕ್ಷದಷ್ಟು ಅಧಿಕ ಮೊತ್ತದ ಹಣವನ್ನು ವಿದ್ಯಾರ್ಥಿವೇತನಗಳಿಗೊಸ್ಕರ ನೀಡಿದ ಮಹಾನೀಯರು ಆಗಿರುತ್ತಾರೆ. ಅಷ್ಟು ಮಾತ್ರವಲ್ಲದೇ ವಿದ್ಯಾಸಂಸ್ಥೆ ಹಾಗೂ ತನ್ನ ಮಾಲೀಕತ್ವದ ಸಂಸ್ಥೆಗಳಲ್ಲಿ ಇವರು ಸುಮಾರು ೫೦೦ಕ್ಕಿಂತಲೂ ಹೆಚ್ಚು ಸಿಬ್ಬಂದಿಗಳಿಗೆ ಉದ್ಯೋಗದಾತರಾಗಿರುತ್ತಾರೆ.
ಇವರು ಇಂದು ದಿನಾಂಕ ೩೧-೧೨-೨೦೨೪ರ ಬೆಳಿಗ್ಗೆ ಮೈಸೂರಿನ ಸ್ವಗೃಹದಲ್ಲಿ ಸ್ವರ್ಗಸ್ಥರಾಗಿರುತ್ತಾರೆ. ಇವರಿಗೆ ಸುಮಾರು ೮೬ ವರ್ಷ ವಯಸ್ಸು ಆಗಿದ್ದು ಇವರಿಗೆ ನಮ್ಮ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ(ರಿ), ವಿದ್ಯಾಗಿರಿ, ಬಂಟ್ವಾಳ ಇದರ ಪ್ರಸ್ತುತ ಅಧ್ಯಕ್ಷರಾದ ಕೂಡಿಗೆ ಪಾಂಡುರAಗ ಶೆಣೈ, ಉಪಾಧ್ಯಕ್ಷೆ ಶ್ರೀಮತಿ ವತ್ಸಲ ಕಾಮತ್, ಜತೆ ಕರ‍್ಯದರ್ಶಿಗಳಾದ ಕೂಡಿಗೆ ಪ್ರಕಾಶ್ ಶೆಣೈ ಮತ್ತು ಅನಿರುದ್ಧ ಕಾಮತ್, ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆ, ವಿದ್ಯಾಗಿರಿ ಬಂಟ್ವಾಳ ಇದರ ಸಂಚಾಲಕಿ ಶ್ರೀಮತಿ ಕೆ. ರೇಖಾ ಶೆಣೈ, ಎಲ್ಲಾ ಸಮೂಹ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರುಗಳು, ಬೋಧಕ -ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿರುತ್ತಾರೆ.

RELATED ARTICLES
- Advertisment -
Google search engine

Most Popular