ಕಾರವಾರ: ಉತ್ತರ ಕನ್ನಡದಲ್ಲಿ ಸತತ ಸುರಿದ ಭಾರೀ ಮಳೆಗೆ ಕಾರವಾರ ಕೆಎಸ್ಸಾರ್ಟಿಸಿ ಬಸ್ಸು ಡಿಪ್ಪೋ ಕೊಳದಂತಾಗಿದ್ದು, 50ಕ್ಕೂ ಹೆಚ್ಚು ಬಸ್ಸುಗಳು ಜಲಾವೃತವಾಗಿವೆ.
ಹೆಬ್ಬುವಾಡ ರಸ್ತೆಯಲ್ಲಿನ ಬಸ್ಸು ಡಿಪ್ಪೋ ದಲ್ಲಿ ಬಸ್ಸುಗಳು ಸಿಲುಕಿದ್ದು, ಬಸ್ಸುಗಳನ್ನು ಹೊರ ತೆಗೆಯಲು ಹರಸಾಹಸಪಡುತ್ತಿದ್ದಾರೆ. ಮೂರು ದಿನಗಳಿಂದ ಇಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಎಲ್ಲೆಡೆ ಜಲಾವೃತಗೊಂಡಿದೆ. ಚರಂಡಿ ನೀರು ಡಿಪ್ಪೋ ಗೆ ನುಗ್ಗಿದ ಕಾರಣ ಡಿಪ್ಪೋ ಸಂಪೂರ್ಣ ಜಲಾವೃತಗೊಂಡಿದೆ.