ಬಸ್ ಛಾವಣಿ ಸೋರುತ್ತಿದ್ದು, ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡುತ್ತಿರುವ ಘಟನೆ ಗದಗ ಜಿಲ್ಲೆಯಲ್ಲಿ ಕಂಡುಬಂದಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಗದಗದಿಂದ ಮುಂಡರಗಿಗೆ ಹೊರಟಿದ್ದ ಬಸ್‌ನ ಛಾವಣಿ ಸೋರಿದ್ದು, ಕೆಲವು ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣ ಮಾಡಿದ್ರೆ, ಇನ್ನು ಕೆಲವರು ಪರದಾಡುವಂತಾಯಿತು. ಅದರಲ್ಲೂ ಗುಡುಗು, ಸಿಡಿಲು ಸಹಿತ ಜೋರಾದ ಮಳೆ ಸುರಿಯುತ್ತಿತ್ತು. ಇಂತಹ ಸಂದರ್ಭದಲ್ಲೂ ಬಸ್‌ನ ಬಾಗಿಲು ಸಹ ಇಲ್ಲ ಎಂದು ಪ್ರಯಾಣಿಕನೋರ್ವ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗಿದೆ.