ಚಿತ್ರದುರ್ಗ: ಸೋಮವಾರ ತಡರಾತ್ರಿ ಸುರಿದ ಭಾರೀ ದಾರಾಕಾರ ಮಳೆಗೆ 25,000 ಕೋಳಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮಹಾದೇವಪುರ ಗ್ರಾಮದಲ್ಲಿ ನಡೆದಿದೆ.
ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೋಳಿಫಾರಂಗೆ ನೀರು ನುಗ್ಗಿದ್ದು, ಸುಮಾರು 25,000 ಕೋಳಿಗಳು ಸಾವನ್ನಪ್ಪಿರುವ ದೃಶ್ಯ ಮನಕಲಕುವಂತಿದೆ. ಮಹಾದೇವಪುರದ ಶಿವಾನಂದಪ್ಪ ಎಂಬವರಿಗೆ ಸೇರಿದ ಸುಮಾರು 25,000 ಕೋಳಿಗಳನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ರವಾನಿಸಬೇಕಿತ್ತು.
ಆದರೆ ಅತಿ ಕಡಿಮೆ ಮಳೆ ಬೀಳುವ ಈ ಪ್ರದೇಶದಲ್ಲಿ ಇಂತಹ ಅವಾಂತರ ನಡೆದ ಪರಿಣಾಮ ಸುಮಾರು 65 ಲಕ್ಷ ರೂ. ಮೌಲ್ಯದ ಹಾನಿಯನ್ನು ರೈತ ಎದುರಿಸುವಂತಾಗಿದೆ. ಹೀಗಾಗಿ ಕೋಳಿ ಸಾಕಣೆದಾರರು ಕಂಗಾಲಾಗಿದ್ದು, ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.