ಹೆಬ್ರಿ :ಹೆಬ್ರಿ ತಾಲೂಕು ಚಾರ ಮೇಲ್ಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ, ಶಿವರಾಯ ಗರೋಡಿ ನೂತನ ಶಿಲಾಮಯ ಗರೋಡಿಯ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವಕ್ಕೆ ಹೆಬ್ರಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ರೂ 105000 ನ್ನು ಗರಡಿಯ ಜೀರ್ಣೋದ್ದಾರ ಸಮಿತಿಗೆ ಇತ್ತೀಚಿಗೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರಾದ ಅಣ್ಣಪ್ಪ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳಾದ ಶೀನ ಪೂಜಾರಿ ಹಾಡಿಮನೆ, ಪಾಂಡುರಂಗ ಪೂಜಾರಿ ಬೇಳಂಜೆ, ಗಣೇಶ್ ಕುಮಾರ್ ಜರವತ್ತು, ಹರೀಶ್ ಪೂಜಾರಿ ಬೇಳಂಜೆ, ಹೆಬ್ರಿ ಪಂಚಾಯತ್ ಅಧ್ಯಕ್ಷರಾದ ತಾರಾನಾಥ್ ಬಂಗೇರ,ಪ್ರವೀಣ್ ಪೂಜಾರಿ ಬಲ್ಲಾಡಿ, ದಿವಾಕರ ಪೂಜಾರಿ ಹುತ್ತುರ್ಕೆ, ಸುರೇಶ್ ಪೂಜಾರಿ ಹುತ್ತುರ್ಕೆ, ಸಂತೋಷ್ ಪೂಜಾರಿ ಬಲ್ಲೆಮನೆ, ನಿತೀಶ್ ಎಸ್ ಪಿ, ಪ್ರಸಾದ್ ಪೂಜಾರಿ, ಗರೋಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ. ಹರ್ಷ ಶೆಟ್ಟಿ, ಗರೋಡಿ ಅನುವಂಶಿಕ ಮೊಕ್ತೇಸರ ಸುರೇಶ್ ಹೆಗ್ಡೆ ತಾರಾಳಿ, ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಶೆಟ್ಟಿ, ಗುತ್ತಿಗೆದಾರ ಹರೀಶ್ ಶೆಟ್ಟಿ, ವಿಜಯ ಪೂಜಾರಿ ಉಳುಮುಂಡು, ಸತೀಶ್ಚಂದ್ರ ಹೆಗ್ಡೆ, ನಾಗಯ್ಯ ಶೆಟ್ಟಿ ಕೊಂಡೆಜೆಡ್ದು, ಅಪ್ಪು ಶೆಟ್ಟಿ ಕೂತಾಡಿ ಮುಂತಾದವರು ಉಪಸ್ಥಿತರಿದ್ದರು.