Tuesday, April 22, 2025
Homeಹೆಬ್ರಿಹೆಬ್ರಿ : ಶಿವಪುರದಲ್ಲಿ ಯಳಗೋಳಿ ಅಕ್ಕಮ್ಮ ಶೆಟ್ಟಿ ಸಂಸ್ಮರಣೆ, 4 ಶಾಲೆಗಳ 1 ಸಾವಿರಕ್ಕೂ ಮಿಕ್ಕಿ...

ಹೆಬ್ರಿ : ಶಿವಪುರದಲ್ಲಿ ಯಳಗೋಳಿ ಅಕ್ಕಮ್ಮ ಶೆಟ್ಟಿ ಸಂಸ್ಮರಣೆ, 4 ಶಾಲೆಗಳ 1 ಸಾವಿರಕ್ಕೂ ಮಿಕ್ಕಿ ಮಕ್ಕಳಿಗೆ ಸಂತರ್ಪಣೆ, ಶಾಲೆಗೆ ಕೊಡುಗೆ

ಹೆಬ್ರಿ: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪುಣೆ ಉದ್ಯಮಿ ಯಳಗೋಳಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.

ಹೆಬ್ರಿ ಮಹಾತಾಯಿ ಅಕ್ಕಮ್ಮ ಶೆಟ್ಟಿಯವರ ಋಣವನ್ನು ತೀರಿಸಬೇಕು ಆ ಮೂಲಕ ಸಮಾಜದ ಸೇವೆ ಮಾಡಬೇಕು, ತಾಯಿ ತೋರಿದ ಆದರ್ಶದ ದಾರಿಯಲ್ಲೇ ನಡೆಯುವುದು ನಮ್ಮ ಧ್ಯೇಯ ಎಂದು ಪುಣೆ ಉದ್ಯಮಿ ಯಳಗೋಳಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ಹೇಳಿದರು.

ಅವರು ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಂಗಳವಾರ ನಡೆದ ಯಳಗೋಳಿ ಚಿಟ್ಟೆಬೆಟ್ಟು ಅಕ್ಕಮ್ಮ ಶೆಟ್ಟಿ 3ನೇ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯು ನೀಡಿದ ಗೌರವ ಸ್ವೀಕರಿಸಿ ಮಾತನಾಡಿದರು.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ಶಿವಪುರ, ಕೆರೆಬೆಟ್ಟು ಮತ್ತು ಮುಕ್ಕಾಣಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ಅನ್ನದಾನದ ಸಂತರ್ಪಣೆಯನ್ನು ನೀಡಲಾಯಿತು. ಶಿವಪುರ ಶಾಲೆಗೆ ಬಟ್ಟಲು ಇಡುವ ಸ್ಟೀಲ್‌ ಸ್ಟ್ಯಾಂಡ್‌ ಕೊಡುಗೆಯಾಗಿ ಹರೀಶ ಶೆಟ್ಟಿ ನೀಡಿದರು. ಕಾರ್ಯಕ್ರಮದಲ್ಲಿ ಪುಣೆ ಉದ್ಯಮಿ ಯಳಗೋಳಿ ಚಿಟ್ಟೆಬೆಟ್ಟು ಹರೀಶ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.

ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ಅಭಿವೃದ್ಧಿಯ ದಾನಿ ಎಚ್.‌ ರಾಜೇಶ ನಾಯಕ್‌, ಹೆಬ್ರಿ ಸಿಟಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್‌, ಹೆಬ್ರಿ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ತಿಪ್ಪೇಸ್ವಾಮಿ, ಪುಣೆ ಉದ್ಯಮಿ ಪ್ರಕಾಶ ಶೆಟ್ಟಿ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.‌ ಜನಾರ್ಧನ್‌, ಅಕ್ಕಮ್ಮ ಶೆಟ್ಟಿ ಕುಟುಂಬಸ್ಥರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಭಾಗವಹಿಸಿದ್ದರು. ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದಿವಾಕರ ಮರಕಾಲ ನಿರೂಪಿಸಿ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular