ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿಗೆ ಕರ್ನಾಟಕ ಬ್ಯಾಂಕ್ ನವರ ಸಿ ಎಸ್ ಆರ್ ಫಂಡ್ ನಿಂದ ಕೊಡ ಮಾಡಿದ ಆಡಿಟೋರಿಯಂ ಹಾಗೂ ಸೌರ ವಿದ್ಯುತ್ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ರಾಜೇಶ್ ನಾಯಕ್ ಅಧ್ಯಕ್ಷರು, ಕಾಲೇಜು ಆಡಳಿತ ಮಂಡಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಬ್ಯಾಂಕ್ ನ ರೀಜನಲ್ ಆಫೀಸ್ ನ ಎಜಿಎಂ ವಾದಿರಾಜ್ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಷ್ಟು ದೊಡ್ಡ ಸಂಸ್ಥೆ ಕಟ್ಟಿ ಶಿಕ್ಷಣ ಧಾರೆ ಎರೆಯುತಿರುವುದು ಕಂಡು ತುಂಬಾ ಸಂತೋಷವಾಯಿತು. ಹೆಬ್ರಿ ಅಂತಹ ಪ್ರದೇಶದಲ್ಲಿ ಅಮೃತ ಭಾರತಿ ಎನ್ನುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಇದೆ ಎಂದು ಕೇಳಿ ತಿಳಿದಿದ್ದ ನಾನು , ಇಂದು ಈ ಸಂಸ್ಥೆಗೆ ಪ್ರಥಮ ಬಾರಿ ಭೇಟಿಕೊಟ್ಟು ಭಾವಪರವಶನಾದೆ. ಜೊತೆಗೆ ನಮ್ಮ ಬ್ಯಾಂಕಿನ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಸಿ ಎಸ್ ಆರ್ ಫಂಡ್ ನ್ನು ಈ ಸಂಸ್ಥೆಗೆ ನೀಡಿದ್ದಕ್ಕೆ ಸಾರ್ಥಕ ಭಾವ ಮೂಡಿತು . ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ ಕರ್ನಾಟಕ ಬ್ಯಾಂಕ್ ನೂರು ವರ್ಷಗಳನ್ನು ಪೂರೈಸಿ, ಒಂಬತ್ತು ನೂರ ಐವತ್ತು ಶಾಖೆಗಳನ್ನು ಹೊಂದಿ ಒಂದು ಸಾವಿರದ ಎಪ್ಪತ್ತ ಆರು ಕೋಟಿ ರೂಪಾಯಿ ವ್ಯವಹಾರವನ್ನು ನಡೆಸುತ್ತಾ , ಸ್ವತಂತ್ರ ಬ್ಯಾಂಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರಾದ ಸತೀಶ್ ಪೈ ಅವರು ಮಾತನಾಡಿ , ಸಮಾಜದ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವವಾದದು. ಸಮಾಜದಲ್ಲಿನ ಧನವುಳ್ಳ ವ್ಯಕ್ತಿಗಳ ಹಣವನ್ನು ಡೆಪಾಸಿಟ್ ರೂಪದಲ್ಲಿ ಪಡೆದು, ಅಗತ್ಯವಿರುವವರಿಗೆ ನೀಡಿ ಸಮಾಜದ ಅಭಿವೃದ್ಧಿಯಲ್ಲಿ ಬ್ಯಾಂಕ್ ಮಹತ್ತರವಾದ ಪಾತ್ರ ನಿರ್ವಹಿಸುತ್ತಿದೆ . ಕರ್ನಾಟಕ ಬ್ಯಾಂಕ್ ನೊಂದಿಗೆ ವ್ಯವಹಾರ ಹೊಂದಿರುವ ಅಮೃತ ಭಾರತಿಗೆ ಇಪ್ಪತ್ತು ಲಕ್ಷಗಳ ಈ ಕೊಡುಗೆ ನೀಡಿದ್ದಕ್ಕಾಗಿ ಅನಂತ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ವೇದಿಕೆಯಲ್ಲಿ ಕರ್ನಾಟಕ ಬ್ಯಾಂಕ್ ನ ಕಾರ್ಕಳ ಶಾಖಾ ಪ್ರಬಂಧಕರಾದ ಮೂರ್ತಿ ಸಿ ಕೆ ಹೆಬ್ರಿ ಶಾಖಾ ಪ್ರಬಂಧಕರಾದ ಗಣೇಶ್ ನಾಯಕ್, ಕಾಲೇಜು ಪ್ರಾಂಶುಪಾಲರಾದ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು.
ಸಂಸ್ಥೆಯ ವತಿಯಿಂದ ವಾದಿರಾಜ ಭಟ್ ಕೆ ಕೆ ಇವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು ಉಪನ್ಯಾಸಕ ಸುಹಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು . ವಿದ್ಯಾರ್ಥಿಗಳು ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.