ಪಡುಬಿದ್ರಿ: ಹೆಜಮಾಡಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಮಹೋತ್ಸವ ಮಾ.8 ರಿಂದ 15 ರವರೆಗೆ ನಡೆಯಲಿದೆ. ಮಾ.8 ರ ಮಹಾಶಿವರಾತ್ರಿಯಂದು ಬೆಳಗ್ಗೆ 10 ಗಂಟೆಗೆ ದೇವರ ಬಲಿ ಸೇವೆ, 11.05ಕ್ಕೆ ಧ್ವಜಾರೋಹಣ, ದೇಗುಲದ ಕುಣಿತ ಭಜನೆ ಮಕ್ಕಳ ತಂಡದಿಂದ ಕುಣಿತ ಭಜನೆ, ಸಂಜೆ 6 ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ಭಜನೆ ನಡೆಯಲಿದೆ.
ಮಾ.10 ರಂದು ಸಂಜೆ 6 ಗಂಟೆಯಿಂದ ಭಕ್ತಿರಸ ಸಂಜೆ, ರಾತ್ರಿ 8.30ರಿಂದ ಹೆಜಮಾಡಿ ಶಿವ ಫ್ರೆಂಡ್ಸ್ ವಾರ್ಷಿಕೋತ್ಸವ, ಸಭಾ ಕಾರ್ಯಕ್ರಮ ನಡೆಯಲಿದೆ. ಮಾ.11 ರಂದು ರಾತ್ರಿ ಬಾಕಿಮಾರು ದೀಪ, ಮಾ.12ರಂದು 5.30ಕ್ಕೆ ಯಕ್ಷಗಾನ ನಡೆಯಲಿದೆ. ಮಾ. 13 ರಂದು ಬೆಳಗ್ಗೆ 9.30ಕ್ಕೆ ಮಹಾ ಪೂಜೆ, ಮಧ್ಯಾಹ್ನ ಮಹಾ ರಥಾರೋಹಣ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಶ್ರೀ ಕೊರ್ದ್ದಬ್ಬು ದೈವದ ಭೇಟಿ, ರಾತ್ರಿ 10.30ಕ್ಕೆ ಮಹಾ ರಥೋತ್ಸವ, ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾ.14 ರಂದು 6.30 ಕ್ಕೆ ಕವಾಟೋದ್ಘಾಟನೆ, ತುಲಾಭಾರ, ಮಾ.15 ರಂದು ಬೆಳಗ್ಗೆ 4 ಗಂಟೆಗೆ ಧ್ವಜಾವರೋಹಣ, ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಮಾ.16ರಂದು ಸಂಜೆ 4.30ಕ್ಕೆ ಪಂಚ ದೈವ ತಂಬಿಲ ನಡೆಯಲಿದೆ ಎಂದು ದೇವಾಲಯದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ ತಿಳಿಸಿದ್ದಾರೆ.