ಮೂಡುಬಿದಿರೆ: ತಾಲೂಕಿನ ಆಲಂಗಾರು ಸಮೀಪದ ಬನ್ನಡ್ಕ ಸೋನ್ಸ್‌ಫಾರ್ಮ್ ಬಳಿ ವಲಸೆ ಬಂದಿದ್ದ ಹೆಜ್ಜೇನು ಗುಂಪು ಮಕ್ಕಳು ಮತ್ತು ಮಹಿಳೆಯರಿಗೆ ದಾಳಿ ನಡೆಸಿರುವ ಘಟನೆ ನಡೆದಿದೆ.
ವಲಸೆ ಬಂದಿರುವ ಹೆಜ್ಜೇನಿನ ಗುಂಪು ಸುಮಾರು ನಾಲ್ಕೈದು ದಿನಗಳಿಂದ ಸೋನ್ಸ್ ಫಾರ್ಮ್‌ನ ಗೇಟ್ ಒಳಗಡೆ ವಾಸ್ತವ್ಯ ಹೂಡಿದ್ದು, ಇದಕ್ಕೆ ಗಿಡುಗ ದಾಳಿ ನಡೆಸಿರುವುರುವುದರಿಂದ ರೊಚ್ಚಿಗೆದ್ದು ಶಾಲಾ ಮಕ್ಕಳು, ಮಹಿಳೆಯರು ಹಾಗೂ ಸಮೀಪದ ಹತ್ತು ಮಂದಿಯ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಬನ್ನಡ್ಕ ಸೋನ್ಸ್‌ಫಾರ್ಮ್ ಬಳಿ ಮಕ್ಕಳು, ಮಹಿಳೆಯರಿಗೆ ಮೇಲೆ ಹೆಜ್ಜೇನು ದಾಳಿ
RELATED ARTICLES