Thursday, September 12, 2024
Homeಅಂತಾರಾಷ್ಟ್ರೀಯಹೆಲಿಕಾಪ್ಟರ್‌ ಪತನ | ಪೈಲಟ್‌ ಸಹಿತ ಐವರು ಭೀಕರ ದುರ್ಮರಣ

ಹೆಲಿಕಾಪ್ಟರ್‌ ಪತನ | ಪೈಲಟ್‌ ಸಹಿತ ಐವರು ಭೀಕರ ದುರ್ಮರಣ

ಕಠ್ಮಂಡು: ನೇಪಾಳದ ಕಠ್ಮಂಡುವಿನ ವಾಯುವ್ಯ ಪರ್ವತ ಪ್ರದೇಶದಲ್ಲಿ ಬುಧವಾರ ಹೆಲಿಕಾಪ್ಟರ್‌ ಪತನಗೊಂಡು ಐವರು ಮೃತಪಟ್ಟಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಏರ್‌ ಡೈನಾಸ್ಟಿ ಹೆಲಿಕಾಪ್ಟರ್‌, 9ಎನ್-ಎಝಡ್‌ಡಿ ಕಠ್ಮಂಡುವಿನಿಂದ ರಾಸುವಾಗೆ ತೆರಳುತ್ತಿತ್ತು. ವಿಮಾನ ಟೇಕ್‌ ಆಫ್‌ ಆದ ಮೂರೇ ನಿಮಿಷಕ್ಕೆ ಹೆಲಿಕಾಪ್ಟರ್‌ ಸಂಪರ್ಕ ಕಡಿತಗೊಂಡು ನುವಾಕೋಟ್‌ ಜಿಲ್ಲೆಯ ಸೂರ್ಯ ಚೌರ್-7ರಲ್ಲಿ ಗುಡ್ಡ ಪ್ರದೇಶಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ ಎಂದು ವರದಿಯಾಗಿದೆ. ಘಟನಾ ಸ್ಥಳದಲ್ಲಿ ನಾಲ್ವರು ಚೀನಾ ಪ್ರಜೆಗಳು, ಪೈಲಟ್‌ ಸಹಿತ ಎಲ್ಲರ ಶವಗಳ ಗುರುತು ಪತ್ತೆ ಹಚ್ಚಲಾಗಿದೆ.


ವಿಡಿಯೋ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/WIONews/status/1821136543714562347?ref_src=twsrc%5Etfw%7Ctwcamp%5Etweetembed%7Ctwterm%5E1821136543714562347%7Ctwgr%5Ef8818fe138c6dd95da73a02942219069047f9a80%7Ctwcon%5Es1_&ref_url=https%3A%2F%2Fwww.udayavani.com%2Fnews-section%2Fnational-news%2Fhelicopter-crashes-in-nepals-nuwakot-5-lost-life

RELATED ARTICLES
- Advertisment -
Google search engine

Most Popular