Saturday, November 2, 2024
Homeರಾಷ್ಟ್ರೀಯಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಬಂದ ಸೇನೆಯ ಹೆಲಿಕಾಪ್ಟರ್‌ ಪತನ | ಸೇನಾ ಸಿಬ್ಬಂದಿಯ ರಕ್ಷಿಸಿದ ಸ್ಥಳೀಯರು!

ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಬಂದ ಸೇನೆಯ ಹೆಲಿಕಾಪ್ಟರ್‌ ಪತನ | ಸೇನಾ ಸಿಬ್ಬಂದಿಯ ರಕ್ಷಿಸಿದ ಸ್ಥಳೀಯರು!

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಿಹಾರದಲ್ಲಿ ಭಾರೀ ಜಲಪ್ರವಾಹ ಉಂಟಾಗಿದೆ. ರಕ್ಷಣಾ ಸಿಬ್ಬಂದಿ ಜನರ ರಕ್ಷಿಸುವ ಪ್ರಯತ್ನ ಮಾಡುತ್ತಿದೆ. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ತಂಡ ಸಂಕಷ್ಟಗಳನ್ನು ಎದುರಿಸುತ್ತಿದೆ. ಇಂತಹುದೇ ಸನ್ನಿವೇಶವೊಂದರಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನೀರಿಗೆ ಅಪ್ಪಳಿಸಿರುವ ವಿಡಿಯೋ ಒಂದು ವೈರಲ್‌ ಆಗಿದೆ. ರಕ್ಷಣೆಗೆ ಬಂದಿದ್ದ ಸಿಬ್ಬಂದಿಯೇ ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿನ ಸ್ಥಳೀಯರೇ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಅವರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡು ನೀರಿನಲ್ಲಿ ಮುಳುಗಿದೆ. ಅದರ ಮೇಲೆ ಮೂವರು ಪೊಲೀಸರು ನಿಂತಿದ್ದಾರೆ. ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ಯಾರಾದರೂ ಸಿಲುಕಿಕೊಂಡಿದ್ದಾರೆಯೇ ಎಂಬ ಬಗ್ಗೆ ರಕ್ಷಣಾ ತಂಡ ತನಿಖೆ ನಡೆಸುತ್ತಿದೆ. ಈ ನಡುವೆ ವರದಿಗಾರನೊಬ್ಬ ನೀರಲ್ಲಿ ನಿಂತು ವರದಿ ಮಾಡುತ್ತಿದ್ದಾನೆ. ಆತ ಇದು ವಾಯುಪಡೆಯ ಹೆಲಿಕಾಪ್ಟರ್ ಎಂದು ಹೇಳುತ್ತಿದ್ದಾನೆ. ಸೈನಿಕರ ಪ್ರಾಣ ಉಳಿಸಿದ್ದಕ್ಕೆ ತುಂಬಾ ಸಂತೋಷವಾಗಿದ್ದು, ಗ್ರಾಮಸ್ಥರೆಲ್ಲರೂ ಇದಕ್ಕೆ ಸಹಕರಿಸಿದ್ದಾರೆ ಎಂದಿದ್ದಾನೆ. ಹೆಲಿಕಾಪ್ಟರ್​ನಲ್ಲಿ ಮೂವರು ಸಿಬ್ಬಂದಿ ಇದ್ದರು, ಅವರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೋ ವೀಕ್ಷಿಸಲು ಲಿಂಕ್‌ ಕ್ಲಿಕ್‌ ಮಾಡಿ…

https://x.com/gharkekalesh/status/1842205046320349566?ref_src=twsrc%5Etfw%7Ctwcamp%5Etweetembed%7Ctwterm%5E1842205046320349566%7Ctwgr%5E72b7b0107cc5a42e8b2c3b3261070b403f78e9b3%7Ctwcon%5Es1_&ref_url=https%3A%2F%2Fnewsfirstlive.com%2Fan-advanced-light-helicopter-of-the-indian-air-force-made-a-precautionary-landing-in-inundated-area-during-flood-relief-operations%2F

RELATED ARTICLES
- Advertisment -
Google search engine

Most Popular