Monday, February 10, 2025
Homeಆಂಧ್ರಪ್ರದೇಶಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರ ವಾಶ್‌ರೂಂನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ | ಆರೋಪಿ ಬಂಧನ

ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರ ವಾಶ್‌ರೂಂನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಮಾರಾಟ | ಆರೋಪಿ ಬಂಧನ

ಅಮರಾವತಿ: ಆಂಧ್ರಪ್ರದೇಶದ ಕೃಷ್ಣನ್‌ ಜಿಲ್ಲೆಯ ಇಂಜಿನಿಯರಿಂಗ್‌ ಕಾಲೇಜೊಂದರ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ವಾಶ್‌ ರೂಂನಲ್ಲಿ ಹಿಡನ್‌ ಕ್ಯಾಮೆರಾ ಪತ್ತೆಯಾಗಿದ್ದು, ವಿಡಿಯೋ ಸೆರೆ ಹಿಡಿದು ಮಾರಾಟ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಿಂದ ವಿದ್ಯಾರ್ಥಿಗಳು, ಸ್ಥಳೀಯರು ಕೆರಳಿದ್ದು, ತಪ್ಪಿತಸ್ಥರ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ.
ವಾಶ್‌ರೂಂನಲ್ಲಿ ಮುಚ್ಚಿಟ್ಟಿದ್ದ ವಸ್ತುವನ್ನು ವಿದ್ಯಾರ್ಥಿನಿ ಗಮನಿಸಿದ್ದಾಳೆ. ಆ ವಸ್ತುವನ್ನು ನೋಡಿದಾಗ ಕ್ಯಾಮೆರಾ ಇರುವುದು ಪತ್ತೆಯಾಗಿದೆ. ಕ್ಯಾಮೆರಾ ಪರಿಶೀಲಿಸಿದಾಗ ವಿಡಿಯೊಗಳನ್ನು ನೋಡಿ ಇತರರಿಗೆ ಮಾಹಿತಿ ನೀಡಿದ್ದು, ವಿಷಯ ಅರಿತ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ಹಾಸ್ಟೆಲ್‌ನ ಇಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿ ವಿಜಯ್‌ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ವಾಶ್‌ರೂಂನಲ್ಲಿರುವ ವಿದ್ಯಾರ್ಥಿನಿಯರ 300ಕ್ಕೂ ಹೆಚ್ಚು ಫೋಟೊಗಳು ಮತ್ತು ವಿಡಿಯೋಗಳು ಸೋರಿಕೆಯಾಗಿದ್ದು, ಹಣಕೊಟ್ಟು ಕೆಲವು ವಿದ್ಯಾರ್ಥಿಗಳು ಆರೋಪಿ ವಿಜಯ್‌ನಿಂದ ವಿಡಿಯೋಗಳನ್ನು ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular