ನವದೆಹಲಿ: ಜನಪ್ರಿಯ ಬಾಲಿವುಡ್ ನಟ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ನಟಿಸಿರುವ ʻಮಹಾರಾಜ್ʼ ಚಿತ್ರ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ನಿಗದಿಯಂತೆ ಬಿಡುಗಡೆಯಾಗಬೇಕಿದ್ದ ಚಿತ್ರ ಇಂದು ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿಲ್ಲ.
ಚಿತ್ರವು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಸಂಘಟನೆಯೊಂದು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ ಚಿತ್ರ ತಂಡಕ್ಕೆ ತಡೆ ನೀಡಿದೆ.
ಇದು ಜುನೈದ್ ಅವರ ಮೊದಲ ಚಿತ್ರವಾಗಿದ್ದು, ಚಿತ್ರ ಬಹಿಷ್ಕಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರದಿಂದ Boycott Netflix ಮತ್ತು Ban Maharaj Film ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಗಿದ್ದವು. ಪುಷ್ಠಿ ಮಾರ್ಗ ಎಂಬ ವೈಷ್ಣವ ಪಂಥದ ಸಂಘಟನೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಚಿತ್ರಕ್ಕೆ ತಡೆ ವಿಧಿಸಿದೆ. ಮುಂದಿನ ವಿಚಾರಣೆ ಜೂ. 18ಕ್ಕೆ ನಿಗದಿಯಾಗಿದೆ.