Thursday, September 12, 2024
Homeರಾಷ್ಟ್ರೀಯಕಾಲೇಜಿನಲ್ಲಿ ಹಿಜಾಬ್‌ ನಿಷೇಧ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ | ಬಿಂದಿಯನ್ನೂ ನಿಷೇಧಿಸುತ್ತೀರಾ? : ಸುಪ್ರೀಂ ಕೋರ್ಟ್‌...

ಕಾಲೇಜಿನಲ್ಲಿ ಹಿಜಾಬ್‌ ನಿಷೇಧ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ | ಬಿಂದಿಯನ್ನೂ ನಿಷೇಧಿಸುತ್ತೀರಾ? : ಸುಪ್ರೀಂ ಕೋರ್ಟ್‌ ಪ್ರಶ್ನೆ

ಮುಂಬೈ: ಕರ್ನಾಟಕದಿಂದ ಆರಂಭವಾಗಿದ್ದ ಹಿಜಾಬ್‌ ನಿಷೇಧ ವಿವಾದವು ಈಗ ರಾಷ್ಟ್ರಮಟ್ಟಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಆರಂಭವಾಗಿರುವ ಹಿಜಾಬ್‌ ಪ್ರಕರಣವೊಂದಕ್ಕೆ ಸಂಬಂದಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ವಿವಾದಕ್ಕೆ ಹೊಸ ಟ್ವಿಸ್ಟ್‌ ನೀಡಿದೆ. ಮುಂಬೈನ ಕಾಲೇಜೊಂದಕ್ಕೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್‌, ಹಿಜಾಬ್‌ ನಿಷೇಧದೊಂದಿಗೆ ಮುಂದುವರೆಯಬೇಡಿ ಎಂದು ಕಾಲೇಜಿಗೆ ಸೂಚಿಸಿದೆ. ಹಿಜಾಬ್‌ ನಿಷೇಧಿಸುವುದಾದರೆ ಕಾಲೇಜು ಬಿಂದಿ ಅಥವಾ ತಿಲಕವನ್ನೂ ನಿಷೇಧಿಸುತ್ತದೆಯೇ? ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ನ್ಯಾ. ಸಂಜೀವ್‌ ಖನ್ನಾ, ಪಿ.ವಿ. ಸಂಜಯ್‌ ಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠದ ತೀರ್ಪಿನಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.
ಹಿಜಾಬ್‌ ಮತ್ತು ಕ್ಯಾಪ್‌ಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಕೋರ್ಟ್‌ ತೀರ್ಪು ನೀಡಿದೆ. ಕಾಲೇಜುಗಳು ಇಂತಹ ನಿಯಮಗಳನ್ನು ಮಾಡುವುದನ್ನು ನಿಲ್ಲಿಸಬೇಕಾಗಿದೆ. ತಿಲಕ ಅಥವಾ ಬಿಂದಿಯನ್ನು ಧರಿಸಿದ ವಿದ್ಯಾರ್ಥಿಗಳನ್ನು ಸಹ ಕಾಲೇಜಿನಿಂದ ನಿರ್ಬಂಧಿಸಲಾಗುತ್ತದೆಯೇ? ಎಂದು ನ್ಯಾಯಾಲಯ ಪ್ರಶ್ನಿಸಿದೆ. ಇದು ಯಾವುದೇ ಸೂಚನೆಯ ಭಾಗವಾಗಿಲ್ಲ. ನೀವು ಇದನ್ನು ಹೇಳಿಲ್ಲವಲ್ಲ ಎಂದು ಕಾಲೇಜನ್ನು ಪ್ರತಿನಿಧಿಸಿದ ವಕೀಲರಿಗೆ ನ್ಯಾಯಪೀಠ ಕೇಳಿತು.
ಮಹಿಳೆಯರು ಏನು ಧರಿಸಬೇಕು ಎಂದು ಹೇಳಿ ನೀವು ಹೇಗೆ ಸಬಲೀಕರಣ ಮಾಡುತ್ತೀರಿ? ಮಹಿಳೆಗೆ ಆಯ್ಕೆ ಎಲ್ಲಿದೆ? ಅವರು ಅದನ್ನು ಧರಿಸುತ್ತಾರೆ ಎಂಬ ಅಶಂಕ್ಕೆ ನೀವು ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಿ. ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದ ನಂತರ ಇದನ್ನೆಲ್ಲಾ ಹೇಳುತ್ತಿರುವುದು ದುರದೃಷ್ಟಕರ. ಈಗ ದೇಶದಲ್ಲಿ ಧರ್ಮವಿದೆ ಎಂದು ನೀವು ಹೇಳುತ್ತೀರಿ ಎಂದು ನ್ಯಾಯಮೂರ್ತಿ ಕುಮಾರ್‌ ಹೇಳಿದರು.
ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಬುರ್ಖಾ, ಹಿಜಾಬ್‌ ಅಥವಾ ನಿಖಾಬ್‌ ಧರಿಸುವುದನ್ನು ನಿಷೇಧಿಸಿದ ಚೆಂಬೂರ್‌ (ಮುಂಬೈ) ಕಾಲೇಜು ವಿಧಿಸಿದ್ದ ನಿಷೇಧವನ್ನು ಎತ್ತಿ ಹಿಡಿಯುವ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿರುವ ಅರ್ಜಿಯನ್ನು ಪೀಠ ವಿಚಾರಣೆ ಕೈಗೆತ್ತಿಕೊಂಡಿದೆ.

RELATED ARTICLES
- Advertisment -
Google search engine

Most Popular