ಹಿಮಾಲಯ ವೆಲ್ನೆಸ್ ಕಂಪನಿಯು ಭಾರತದಾದ್ಯಂತ ಒಂದು ದಶಲಕ್ಷ ಮರಗಳನ್ನು ನೆಡುವ ಮೈಲಿಗಲ್ಲನ್ನು ಆಚರಿಸುತ್ತಿದೆ. ಹಿಮಾಲಯದ ಸುಸ್ಥಿರತೆ ಬದ್ಧತೆಯು ಅದರ 2030ರ ದೃಷ್ಟಿಕೋನದೊಂದಿಗೆ ಹೊಸ ದಿಗಂತವನ್ನು ತಲುಪುತ್ತಿದೆ.
ಭಾರತ,- ಭಾರತದ ಪ್ರಮುಖ ಆರೋಗ್ಯ ಉತ್ಪನ್ನಗಳ ತಯಾರಿಕಾ ಸಂಸ್ಥೆಯಲ್ಲಿ ಒಂದಾದ ಹಿಮಾಲಯ ವೆಲ್ನೆಸ್ ಕಂಪನಿಯು ಇತ್ತೀಚೆಗೆ ಭಾರತದಾದ್ಯಂತ ಒಂದು ದಶಲಕ್ಷಕ್ಕಿಂತ ಹೆಚ್ಚು ಮರಗಳನ್ನು ಸಮರ್ಪಿಸಿದ ಸಾಧನೆಗೆ ಭಾಜಪವಾಗಿದೆ. ಈ ಗಮನಾರ್ಹ ಸಾಧನೆಯನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು, ಈ ದಶಲಕ್ಷ ಮರಗಳನ್ನು ಸಮರ್ಪಿತ ಸಂಸ್ಥೆಯ ಸಿಬ್ಬಂದಿಗಳು ನೆಟ್ಟರು. ಇದು ಕಂಪನಿಯ ಪರಿಸರ ಸುಸ್ಥಿರತೆಯ ಬದ್ಧತೆಯಲ್ಲಿ ಒಂದು ದಿಟ್ಟ ಹೆಜ್ಜೆಯನ್ನು ಗುರುತಿಸುತ್ತದೆ.
ಸುಮರು 80 ಪ್ರತಿಶತ ಭೂಮಂಡಲದ ಜೈವವೈವಿಧ್ಯತೆಯು 350 ದಶಲಕ್ಷ ಜನರಿಗೆ ಆಹಾರ ಮತ್ತು ವಿವಧ ಅವಶ್ಯಕತೆಗಳನ್ನು ಪೂರೈಕೆ ಮಾಡುತ್ತದೆ. ಆದರೆ ಪರಿಸರದ ಅವನತಿಯು ಈ ಮೇಲ್ಕಂಡ ಜೈವವೈವಿಧ್ಯೆತೆಯ ಕಾರ್ಯಪ್ರಕ್ರಿಯೆಗಳನ್ನು ಗಂಭೀರ ಸ್ವರೂಪದಲ್ಲಿ ಬೆದರಿಕೆಯನ್ನು ಒಡ್ಡುತ್ತವೆ.
ಈ ಅಮೂಲ್ಯ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತುರ್ತು ಅಗತ್ಯ ಕ್ರಮಗಳನ್ನು ಗುರುತಿಸಿ, ವಿಶೇಷವಾಗಿ ಹೆಚ್ಚಿನ ಪರಿಸರ ಕೂಡಿದ ಪ್ರದೇಶಗಳಲ್ಲಿ, ಹಿಮಾಲಯ ವೆಲ್ನೆಸ್ ಕಂಪನಿಯು ಅರಣ್ಯ ಪ್ರದೇಶಗಳನ್ನು ರಕ್ಷಿಸಲು ಮತ್ತು ಪುನಃಸ್ಥಾಪಿಸಲು ಸಕ್ರಿಯ ಕ್ರಮಗಳನ್ನು ತೆಗೆದುಕೊಂಡಿದೆ. 2012 ರಲ್ಲಿ ಯುನೆಸ್ಕೋದ ಪಶ್ಚಿಮ ಘಟ್ಟಗಳನ್ನು ಜೈವವೈವಿಧ್ಯತೆಯ ಹಾಟ್‌ಸ್ಪಾಟ್ ಎಂದು ಗುರುತಿಸಿದ್ದಕ್ಕೆ ಅನುಗುಣವಾಗಿ, ದೂರದೃಷ್ಟಿಯುಳ್ಳ ಸರ್ಕಾರೇತರ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಈ ಪರಿಸರ ಸಂಪತ್ತನ್ನು ಸಂರಕ್ಷಿಸಲು ಹಿಮಾಲಯ ಪ್ರತಿಜ್ಞೆ ಮಾಡಿದೆ. ಅವರು ಪಶ್ಚಿಮ ಘಟ್ಟಗಳಾದ್ಯಂತ ವ್ಯಾಪಕ ಮರ ನೆಡುವ ಉಪಕ್ರಮವನ್ನು ಕೈಗೊಂಡಿದ್ದಾರೆ, ಪ್ರದೇಶದ ಸಮೃದ್ಧ ಜೈವವೈವಿಧ್ಯತೆಯನ್ನು ಪುನಃಸ್ಥಾಪಿಸಲು ಮತ್ತು ಸಂರಕ್ಷಿಸಲು ಒಂಬತ್ತು ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಟ್ಟಿದ್ದಾರೆ. ಕರ್ನಾಟಕದಲ್ಲಿ, ಧಾರವಾಡ, ಬೆಳಗಾವಿ, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತು ಸಿರಸಿ ಸೇರಿದಂತೆ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ.
ಮರ ನೆಡುವ ಕಾರ್ಯ ಯೋಜನೆಯು ಸ್ಥಳೀಯ ಪ್ರದೇಶದ ಜೈವವೈವಿಧ್ಯಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತವೆ, ವಿವಿಧ ಜೀವಿ ಪ್ರಭೇದಗಳಿಗೆ ಆವಾಸಸ್ಥಾನಗಳನ್ನು ಒದಗಿಸುತ್ತವೆ ಮತ್ತು ಇಂಗಾಲವನ್ನು ಸಂಗ್ರಹಿಸಲು ಸಹಾಯ ಮಾಡುತ್ತವೆ. ಪರಿಸರ ತಜ್ಞರ ಪ್ರಕಾರ, ಈ ಪ್ರದೇಶಗಳ ಮರುಅರಣ್ಯೀಕರಣವು ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಉಪಕ್ರಮಗಳು ಮಣ್ಣಿನ ಸವೆತವನ್ನು ತಡೆಯಲು ಸಹ ಸಹಾಯ ಮಾಡುತ್ತವೆ, ಇದು ಪಶ್ಚಿಮ ಘಟ್ಟಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಗತ್ಯವಾಗಿದೆ.
ಈ ಸಾಧನೆಯ ಬಗ್ಗೆ ಹಿಮಾಲಯ ವೆಲ್ನೆಸ್ ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕರಾದ ಶ್ರೀ ಕೆಜಿ ಉಮೇಶ್ ರವರ ಪ್ರತಿಕ್ರಿಯೆ
“ಕಂಪನಿಯ ಪ್ರಯತ್ನಗಳಿಗೆ ವಿವಿಧ ಸರ್ಕಾರೇತರ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಇತರ ಸಂಘಟನೆಗಳೊಂದಿಗಿನ ಬಲವಾದ ಸಹಯೋಗದಿಂದ ಬೆಂಬಲ ದೊರೆಯುತ್ತದೆ. ಈ ಪಾಲುದಾರಿಕೆಗಳು ಯೋಜನೆಗಳ ಪರಿಣಾಮವನ್ನು ಹೆಚ್ಚಿಸಿವೆ, ಸಂಪನ್ಮೂಲಗಳು ಮತ್ತು ತಜ್ಞತೆಯನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ. ಸಮುದಾಯದ ಭಾಗವಹಿಸುವಿಕೆಯು ಸಹ ಈ ಉಪಕ್ರಮಗಳ ಯಶಸ್ಸಿಗೆ ನಿರ್ಣಾಯಕ ಅಂಶವಾಗಿದೆ. ಸ್ಥಳೀಯ ಸಮುದಾಯದ ಸದಸ್ಯರು ಮತ್ತು ಎನ್‌ಜಿಒಗಳು ಸಕ್ರಿಯವಾಗಿ ಭಾಗವಹಿಸಿವೆ, ಅಮೂಲ್ಯವಾದ ಸ್ಥಳೀಯ ಜ್ಞಾನವನ್ನು ತಂದು, ಮಾಲೀಕತ್ವದ ಭಾವನೆಯನ್ನು ಬೆಳೆಸಿವೆ. ಈ ಉಪಕ್ರಮವು ಕಂಪನಿಯ ಮೂಲ ತತ್ವಶಾಸ್ತ್ರವಾದ ‘ಜೀವನದ ಕಾಳಜಿ’ಯಲ್ಲಿ ಬೇರೂರಿದೆ, ಇದು ‘ಪ್ರತಿ ಮನೆಯಲ್ಲೂ ಆರೋಗ್ಯ ಮತ್ತು ಪ್ರತಿ ಹೃದಯದಲ್ಲೂ ಸಂತೋಷ’ ಎಂಬ ದೃಷ್ಟಿಕೋನವನ್ನು ಒಳಗೊಂಡಿದೆ. ಹಿಮಾಲಯದಲ್ಲಿ, ಜನರಿಗೆ ಪ್ರಯೋಜನಕಾರಿಯಾದ ಉತ್ಪನ್ನಗಳು ಗ್ರಹಕ್ಕೂ ಪ್ರಯೋಜನಕಾರಿಯಾಗಿರಬೇಕು ಎಂದು ನಾವು ನಂಬುತ್ತೇವೆ ಎಂದು ಈ ಯೋಜನೆಯ ಕಾರ್ಯಕ್ಷಮತೆಯ ಬಗ್ಗೆ ನಿರ್ದೇಶಕರು ಪ್ರತಿಕ್ರಯಿಸಿದರು.