~ಸಾಮಾಜಿಕ ಅಭಿವೃದ್ಧಿಯ ಮೂಲಕ ಯುವ ಪೀಳಿಗೆ ಮನಸ್ಸುಗಳಿಗೆ ಬೆಂಬಲ ಮತ್ತು ಶಕ್ತಿಯನ್ನು ಸನ್ನದ್ಧಗೊಳಿಸಿ ಶಾಲೆಯನ್ನು ಆಧುನಿಕ ಮೂಲಸೌಕರ್ಯದೊಂದಿಗೆ ಪರಿವರ್ತನೆ
ಬೆಂಗಳೂರು : ಭಾರತದ ಮುಂಚೂಣಿಯ ವೆಲ್ನೆಸ್ ಬ್ರಾಂಡ್ ಗಳಲ್ಲಿ ಒಂದಾದ ಹಿಮಾಲಯ ವೆಲ್ನೆಸ್ ಕಂಪನಿಯು ಬೆಂಗಳೂರಿನ ಮಾಕಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಸಂಪೂರ್ಣ ನವೀಕರಣ ಪೂರ್ಣಗೊಳಿಸಿದೆ. ಈ ಯೋಜನೆಯು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಸುಸ್ಥಿರ ಅಭಿವೃದ್ಧಿಯ ಗುರಿ (ಎಸ್.ಡಿ.ಜಿ.-4) ಪೂರಕವಾಗಿದ್ದು ಇದು ಸಮುದಾಯ ಅಭಿವೃದ್ಧಿಗೆ ಮತ್ತು ಸಕಾರಾತ್ಮಕ ಬದಲಾವಣೆಗೆ ಕಂಪನಿಯ ಬದ್ಧತೆಯನ್ನು ತೋರುತ್ತದೆ. ಕಂಪನಿಯ ಉದ್ಯಮ ತತ್ವವಾದ, “ತನ್ನ ಸಮುದಾಯದ ಆರೈಕೆ” ಧ್ಯೇಯೋದ್ದೇಶದಿಂದ ಪ್ರೇರಿತವಾದ ವಿವಿಧ ಮೌಲ್ಯಗಳ ಯೋಜನೆಯ ಜೀವನವನ್ನು ಉತ್ತಮಗೊಳಿಸುವುದರಲ್ಲಿ ನಂಬಿಕೆ ಇರಿಸಿದ್ದು ಅದು ಈ ಬದ್ಧತೆಗೆ ಅನುಗುಣವಾಗಿ ಮಾಕಳಿಯ ಶಾಲೆಯನ್ನು ಪರಿವರ್ತನೆಗೊಳಿಸಿದೆ.
ಸರ್ಕಾರದ ಅನುಮೋದನೆಗಳ ಬೆಂಬಲ ಮತ್ತು ಕಟ್ಟಡ ನಿರ್ಮಾಣದ ಸಹಯೋಗದೊಂದಿಗೆ ಕಂಪನಿಯು ಸಾಮಾಜಿಕ ಹಾಗೂ ಶೈಕ್ಷಣಿಕ ವಲಯವನ್ನು ಪುನಶ್ಚೇತನಗೊಳಿಸುವ ಪ್ರಯಾಣ ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪೂರಕ ವಾತಾವರಣ ನೀಡುವ ಪೂರಕ ಕಲಿಕಾ ಪರಿಸರ ಸೃಷ್ಟಿಸುವ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಮೂರು ಅಂತಸ್ತಿನ ಕಟ್ಟಡ ನಿರ್ಮಾಣಗೊಂಡಿದೆ. ಈ ಶಾಲೆಯಲ್ಲಿ ಪ್ರಾಂಶುಪಾಲರ ಕೋಣೆ, ಸಿಬ್ಬಂದಿ ಕೋಣೆ, ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಅಡುಗೆಮನೆ, ಭೋಜನ ಸ್ಥಳ, ಮೂರು ತರಗತಿಗಳು, ಸಮುದಾಯ ಸಭಾಂಗಣ, ಡಿಜಿಟಲ್ ತರಗತಿಗಳಿಗೆ ಅನುಕೂಲ ಮತ್ತು ನೀರು ಶುದ್ಧೀಕರಣ ವ್ಯವಸ್ಥೆ ಹೊಂದಿದೆ. ಸಿಬ್ಬಂದಿಯ ಕೋಣೆ ಮತ್ತು ತರಗತಿಗಳನ್ನು ಅತ್ಯಾಧುನಿಕ ಪೀಠೋಪಕರಣದೊಂದಿಗೆ ಸಜ್ಜುಗೊಳಿಸಲಾಗಿದೆ. ಇದಲ್ಲದೆ ಕಂಪನಿಯು ಮೂರು ವರ್ಷಗಳ ಕಾಲ ಶಾಲೆಯ ಆವರಣವನ್ನು ಸುಸಜ್ಜಿತವಾಗಿ ನಿರ್ವಹಿಸಲು ಬದ್ಧವಾಗಿದೆ.
ಹಿಮಾಲಯ ವೆಲ್ನೆಸ್ ಕಂಪನಿಯ ಮಾನವ ಸಂಪನ್ಮೂಲ ನಿರ್ದೇಶಕರಾದ ಕೆ.ಜಿ. ಉಮೇಶ್ ಅವರು, ಸಮುದಾಯದ ಅಭಿವೃದ್ಧಿಗೆ ಕಂಪನಿಯ ಬದ್ಧತೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅವರು, “ನಮ್ಮ ಕಂಪನಿ ಸಮಾಜದ ಅಭಿವೃದ್ಧಿಪಡಿಸಲು ಕಾಳಜಿ ವಹಿಸುತ್ತೇವೆ. ಜೊತೆಗೆ ಸಮಾಜದ ಸಕಾರಾತ್ಮಕ ಬೆಳವಣಿಗೆ ಆಗುವುದರಲ್ಲಿ ನಾವು ಬದ್ಧರಾಗಿದ್ದೇವೆ. ಈ ಸಾಮಾಜಿಕ ಬದಲಾವಣೆಗಳಿಂದ ಜೀವನಶೈಲಿಯನ್ನು ಪರಿವರ್ತಿಸಿಕೊಳ್ಳಬಹುದು ಎಂದು ನಾವು ನಂಬಿಕೆ ಇರಿಸಿದ್ದೇವೆ” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
“ಪ್ರಸ್ತುತ ಸರ್ಕಾರಿ ಶಾಲೆಯ ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ, ಸಮಾಜದ ಸುಸ್ಥಿರ ಅಭಿವೃದ್ಧಿ ನಮ್ಮ ಕಾಳಜಿಯ ನಿದರ್ಶನ” ಎಂದು ವಿವರಿಸಿದರು.
“ಕಲಿಕೆಗೆ ಪೂರಕ ವಾತಾವರಣ ಒದಗಿಸುವ ಮೂಲಕ ನಾವು ಯುವ ಮನಸ್ಸುಗಳನ್ನು ಸ್ವಯಂ ಅಭಿವೃದ್ಧಿ ಮತ್ತು ಭವಿಷ್ಯದ ಉದ್ಯೋಗಾರ್ಹತೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಗುರಿ ಹೊಂದಿದ್ದೇವೆ” ಎಂದರು
ಸುಸ್ಥಿರ ಶೈಕ್ಷಣಿಕದ ಮೂಲಸೌಕರ್ಯ ಪೂರೈಸಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೆ ಪರಿವರ್ತಿಸಿದ ಹಿಮಾಲಯ ವೆಲ್ನೆಸ್ ಕಂಪನಿ
RELATED ARTICLES