ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ ಹಿಂದಿ ದಿನಾಚರಣೆಯ ಸಂದರ್ಭದಲ್ಲಿ ನ್ಯೂ ವೈಬ್ರಂಟ್ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರು ಹಾಗೂ ಹಿಂದಿ ವಿಭಾಗ ಮುಖ್ಯಸ್ಥರಾದಡಾ.ವಿ ರಶ್ಮಿ ಅರಸ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಾ , ‘ಹಿಂದಿ ಭಾಷೆ ಭಾರತದ ಅಧಿಕೃತ ಭಾಷೆ ಆಗಿದ್ದುಅದುರಾಷ್ಟ್ರ ಭಾಷೆ ಆಗಬೇಕೆಂದು ಕರೆಕೊಟ್ಟರು. ದೇಶದ ಹಲವೆಡೆ ಹಿಂದಿ ಮಾತನಾಡುವಜನರಿದ್ದಾರೆ.ಹಿಂದಿ ಯಾರಿಗೂ ಹೇರಿಕೆಯಲ್ಲ, ಅದನ್ನುಅಭಿಮಾನದಿಂದಎಲ್ಲರೂ ಸ್ವೀಕರಿಸಬೇಕು.ಪರ್ವತ ಸಾಲು ದೇಶವನ್ನುರಕ್ಷಿಸುವಂತೆ, ಹಿಂದಿ ಭಾಷೆಕಲಿತರೆಅದು ವ್ಯಕ್ತಿಯನ್ನುಎಲ್ಲಾ ಸಂದರ್ಭದಲ್ಲಿಯೂ ರಕ್ಷಿಸುತ್ತದೆ.ಹಿಂದಿ ಬಗ್ಗೆ ಅಭಿಮಾನ ಹಾಗೂ ಅಭಿರುಚಿಅತ್ಯಗತ್ಯಎಂದು ತಿಳಿಸಿದರು. ಮಹಾವೀರ ಪದವಿಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಮಾತನಾಡಿ, ಹಿಂದಿ ಬಹಳ ಸರಳವಾದ, ಮಧುರವಾದ ಭಾಷೆಯಾಗಿದೆಎಂದು ತಿಳಿಸಿದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಹರೀಶ್, ಹಿಂದಿ ವಿಭಾಗ ಮುಖ್ಯಸ್ಥೆ ಶಾರದಾ, ಉಪನ್ಯಾಸಕಿ ಮೊನಿಶಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರುತಿ ಸ್ವಾಗತಿಸಿ, ವೈಷ್ಣವಿ ವಂದಿಸಿದರು.ಕೌಶಿಕ್ ಅತಿಥಿ ಪರಿಚಯ ಮಾಡಿದರು.ರೋಹಿಸ್ಟನ್ ಪಿಂಟೋ ಕಾರ್ಯಕ್ರಮತಿ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶ್ರೀ ಮಹಾವೀರಕಾಲೇಜು ಮೂಡುಬಿದಿರೆಯಲ್ಲಿ ಹಿಂದಿ ದಿನಾಚರಣೆ
RELATED ARTICLES