ವಿಟ್ಲ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಸದಸ್ಯ ಅಕ್ಷಯ್ ರಜಪೂತ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅಕ್ಷಯ್ ನನ್ನು ಹಾವೇರಿ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ ಎನ್ನಲಾಗಿದ್ದು, ಪೊಲೀಸರ ಈ ಪ್ರಕ್ರಿಯೆಯನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದೆ. ಅಕ್ಷಯ ರಜಪೂತ್ ಗೆ ಗಡಿಪಾರು ಆದೇಶವಿದ್ದ ಕಾರಣ ವಿಟ್ಲ ಪೊಲೀಸರು ಬಂಧಿಸಿ ಹಾವೇರಿಗೆ ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಟ್ಲ ಠಾಣೆಯಲ್ಲಿ ಗಡಿಪಾರು ಪ್ರಕ್ರಿಯೆ ಇದೇ ಮೊದಲ ಬಾರಿ ನಡೆದಿದೆ. ಅಕ್ಷಯ್ ರಜಪೂತ್ ಅನೇಕ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಅನೇಕ ಕೋಮು ಸಂಘರ್ಷ ಪ್ರಕರಣಗಳಲ್ಲಿ ಮತ್ತು ಕಾನೂನು ಬಾಹಿರ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪಗಳಿವೆ. ಮನೆಯಿಂದ ರಜಪೂತ್ ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.