ಹಿರ್ಗಾನ: ಶ್ರೀ ದತ್ತ ಮಂದಿರ ನೆಲ್ಲಿಕಟ್ಟೆ, ಹಿರ್ಗಾನ ಇದರ ವತಿಯಿಂದ ಆ.25ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 21ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ನೆಲ್ಲಿಕಟ್ಟೆಯ ಶ್ರೀ ದತ್ತ ಮಂದಿರದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.
12 ಗಂಟೆಯಿಂದ ದೇವರಿಗೆ ವಿಶೇಷ ಪೂಜೆ, ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಯಿಂದ ಮುದ್ದು ಕೃಷ್ಣ ಸ್ಪರ್ಧೆ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು ಹಾಗೂ ಮೋಜಿನ ಆಟಗಳು ನಡೆಯಲಿವೆ. ಶ್ರೀ ದತ್ತ ಮಂದಿರ ನೆಲ್ಲಿಕಟ್ಟೆ, ಹಿರ್ಗಾನ, ವಿಶ್ವ ಹಿಂದೂ ಪರಿಷತ್ ಬಜರಂಗ ದಳ, ಹಿರ್ಗಾನ ವಲಯ, ಶ್ರೀ ದತ್ತ ಭಜನಾ ಮಂಡಳಿ, ನೆಲ್ಲಿಕಟ್ಟೆ, ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ, ನೆಲ್ಲಿಕಟ್ಟೆ, ಶ್ರೀ ದತ್ತ ನಾಸಿಕ್ ಬ್ಯಾಂಕ್, ಶ್ರೀ ದತ್ತ ಯಕ್ಷಗಾನ ಕಲಾ ಮಂಡಳಿ ಮುಂತಾದ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಲಿವೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.