ದಾವಣಗೆರೆ-ಆಗಸ್ಟ್,
ದಾವಣಗೆರೆಯ ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಆಶ್ರಯದಲ್ಲಿ ಇತ್ತೀಚಿಗೆ ಸಿದ್ದವೀರಪ್ಪ ಬಡಾವಣೆಯ ಯಗಟಿ ಮಲ್ಲಿಕಾರ್ಜುನ ಸಭಾಂಗಣದಲ್ಲಿ ನಡೆದ ಶ್ರಾವಣ ಮಾಸದ ಪ್ರಯುಕ್ತ “ಶ್ರಾವಣ ಗೃಹ ಸಂಭ್ರಮ” ಸಮಾರಂಭವನ್ನು ಉದ್ಘಾಟಿಸಿ ಕಲಾಕುಂಚ ಎಂ.ಸಿ.ಸಿ. ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರರವರು ಮಾತನಾಡಿ “ನಮ್ಮ ನಾಡಿನ ಆಧ್ಯಾತ್ಮ ಪರಂಪರೆಯ ಸಂಸ್ಕೃತಿ, ಸಂಸ್ಕಾರಗಳ ಇತಿಹಾಸ ಶ್ರಾವಣ ಮಾಸ.” ಕೆಲವು ಖಿನ್ನತೆಯ ಮನಸ್ಸುಗಳನ್ನು ಪುಳಕಿತೊಗಳಿಸುವ ಶಕ್ತಿ ಈ ಶ್ರಾವಣ ಸಂಭ್ರಮಕ್ಕೆ ಇದೆ ಎಂದು ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ಮಾತನಾಡಿ ಶ್ರಾವಣ ಮಾಸದ ಇತಿಹಾಸ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಕುಂಚ ಸಿದ್ದವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್ ಮಾತನಾಡಿ, ನಮ್ಮ ನಿಮ್ಮೆಲ್ಲರ ಈ ಪೂಜಾ ವಿಧಿ ವಿಧಾನ ಕೇವಲ ಶ್ರಾವಣ ಮಾಸಕ್ಕೆ ಸೀಮಿತ ವಾಗದೇ ವರ್ಷಪೂರ್ತಿ ನಡೆದುಕೊಂಡು ಬಂದರೆ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು. ಕಲಾಕುಂಚದ ಸಂಸ್ಥಾಪಕರಾದ ಸಾಲಿ ಗ್ರಾಮ ಗಣೇಶ್ ಶೆಣೈ, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದುಷಿ ಮಂಗಳಗೌರಿಯವರ ನೇತೃತ್ವದಲ್ಲಿ ಸಾಮೂಹಿಕ ಭಜನೆ, ಸಮೂಹ ನೃತ್ಯದೊಂದಿಗೆ ನೆರೆದ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಸೋದರಿಯರು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಸಂಭ್ರಮಿಸಿದರು. ಎಲ್ಲಾ ಮುತ್ತೈದೆಯರಿಗೆ ಬಾಗೀನ ಉಡಿ ತುಂಬುವುದರದೊಂದಿಗೆ ಗೌರವಿಸಿದರು. ಶಾಖೆಯ ಖಜಾಂಚಿ ರೇಣುಕಾ ರಾಮಣ್ಣರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಪ್ರಧಾನ ಕಾರ್ಯದರ್ಶಿ ಸುಮಾ ಏಕಾಂತಪ್ಪ ಸ್ವಾಗತಿಸಿದರು. ಲೀಲಾ ಸುಭಾಷ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಮಮತಾ ಕೊಟ್ರೇಶ್ ವಂದಿಸಿದರು.